ಮಧ್ಯ ಆಫ್ರಿಕಾದಲ್ಲಿ ಸೇನಾದಾಳಿ: ಹೆಮ್ಮಾಡಿ ನಿವಾಸಿ ಸಾವು
ಉಡುಪಿ: ಮಧ್ಯ ಆಫ್ರಿಕಾದಲ್ಲಿ ಮಂಗಳವಾರ ನಡೆದ ಸೇನಾಪಡೆಯ ದಾಳಿಯಲ್ಲಿ ಇಬ್ಬರು ಭಾರತೀಯರು ಮೃತಪಟ್ಟಿದ್ದು ಅದರಲ್ಲಿ ಒಬ್ಬರು ಕುಂದಾಪುರದ ನಿವಾಸಿ ಎಂದು ತಿಳಿದುಬಂದಿದೆ. ಮೃತರು ಕೃಷ್ಣ ಮೊಗವೀರ(40) ಎಂದು ಗುರುತಿಸಲಾಗಿದ್ದು, ಅವರು ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾಮದ ನಾರಾಯಣ ಮೊಗವೀರ ಎಂಬವರ ಮಗ ಎಂದು ತಿಳಿದುಬಂದಿದೆ. ಅವರು ಉದ್ಯೋಗದ ನಿಮಿತ್ತ ಅನೇಕ ವರ್ಷಗಳಿಂದ ಮಧ್ಯ ಆಫ್ರಿಕಾದಲ್ಲಿದ್ದು, ಮಂಗಳವಾರ ಮಧ್ಯಾಹ್ನ ಸೇನಾಪಡೆಯ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಮೃತಪಟ್ಟ ಇನ್ನೊಬ್ಬ ಭಾರತೀಯ ಲಕ್ನೋ ನಿವಾಸಿ ಎಂದು ತಿಳಿದುಬಂದಿದೆ.
ಅನಾಲಿಟಿಕಲ್ ಟ್ರೈನಿ ಹುದ್ದೆಗೆ ಅರ್ಜಿ ಆಹ್ವಾನ
ಮಂಗಳೂರು: ಸುಳ್ಯ ತಾಲೂಕಿನ ಕಡಬದಲ್ಲಿರುವ ಭಾರತೀಯ ರಬ್ಬರ್ ಸಂಶೋಧನಾ ಸಂಸ್ಥೆ ತನ್ನ ಪ್ರಾದೇಶಿಕ ಮಣ್ಣು ಪರೀಕ್ಷಾ ಕೇಂದ್ರಕ್ಕೆ ವಿಶ್ಲೇಷಣಾತ್ಮಕ ಶಿಕ್ಷಾರ್ಥಿ (ಅನಾಲಿಟಿಕಲ್ ಟ್ರೈನಿ) ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಏಕೈಕ ಹುದ್ದೆಗೆ ಏಪ್ರಿಲ್ 9ರಂದು ಸಂದರ್ಶನ ನಡೆಯಲಿದ್ದು ವಿವರಗಳಿಗೆ ಸಂಸ್ಥೆಯ ವೆಬ್‌ಸೈಟ್ ಢಿಢಿಢಿ.್ಠ್ಡಛಿಛಿಜ್ಠಛ್ಟಿಛ್ಠಜ.್ಟ್ಠ್ಜ.್ಝಟಿ ಗೆ ಭೇಟಿ ನೀಡಬಹುದು.