ರು. 10 ಲಕ್ಷ ವರದಕ್ಷಿಣೆ ಕೇಳಿದ ಪತಿ ವಿರುದ್ಧ ದೂರು
ಮಂಗಳೂರು: ವರದಕ್ಷಿಣೆ ಆಸೆಗಾಗಿ ಮನೆಯಿಂದ ಹೊರದಬ್ಬಿದ ಪತಿ ವಿರುದ್ಧ ಪತ್ನಿ ಬಿಜೈ ನಿವಾಸಿ ಶೃತಿ ಗಟ್ಟಿ ಮಹಿಳಾ ಪೊಲೀಸರಿಗೆ ದೂರು ನೀಡಿದ್ದಾರೆ. ಕಾವೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ 2010 ನ.11ರಂದು ದೀನ್ರಾಜ್ ಗಟ್ಟಿ ಜತೆ ಮದುವೆಯಾಗಿತ್ತು. ವರದಕ್ಷಿಣೆಯಾಗಿ 20 ಪವನ್ ಚಿನ್ನಾಭರಣ ನೀಡಲಾಗಿತ್ತು. ಗರ್ಭಿಣಿಯಾದ ಬಳಿಕವೂ ನಡತೆ ಬಗ್ಗೆ ಸಂಶಯ ಪಡುತ್ತಿದ್ದರು. ಯಾರೊಂದಿಗೂ ಮಾತನಾಡಲು ಬಿಡುತ್ತಿರಲಿಲ್ಲ. ಮಗು ಆದ ಬಳಿಕವೂ 10ಲಕ್ಷ ವರದಕ್ಷಿಣೆ ತರಬೇಕು ಎಂದು ಪೀಡಿಸಿದರು. ನನ್ನ ತಂದೆ ಹೆಸರಿನ ಸೋಮೇಶ್ವರ ದ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಬೇಕು ಎಂದು ಪತಿ ದೀನ್ರಾಜ್ ಒತ್ತಾಯಿಸಿದ್ದಾನೆ ಎಂದು ಪತ್ನಿ ಶೃತಿ ಗಟ್ಟಿ ಮಹಿಳಾ ಪೊಲೀಸರಿಗೆ ದೂರು ನೀಡಿದ್ದಾರೆ. ಅತ್ತೆ ಮಾವ ವಿರುದ್ಧವೂ ಸೊಸೆ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದಾರೆ. 20 ಪವನ್ ಚಿನ್ನಾಭರಣವನ್ನು ಪತಿ ಮನೆಯವರು ವಶಪಡಿಸಿಕೊಂಡಿದ್ದು ಅದನ್ನು ವಾಪಸ್ ತೆಗೆಸಿಕೊಡಬೇಕು, ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.