ಭಾಷಾ ಪರೀಕ್ಷೆಗೆ 328 ಮಂದಿ ಗೈರು
ಮಂಗಳೂರು: ಜಿಲ್ಲೆಯಲ್ಲಿ ಬುಧವಾರ ಜರುಗಿದ ದ್ವಿತೀಯ ಪಿಯುಸಿ ಕನ್ನಡ, ಮಲಯಾಳಂ, ಫ್ರೆಂಚ್ ಭಾಷಾ ಪರೀಕ್ಷೆಯಲ್ಲಿ ಒಟ್ಟು 328 ಮಂದಿ ಗೈರಾಗಿದ್ದಾರೆ. ಕನ್ನಡ ಪರೀಕ್ಷೆಗೆ 21449 ಮಂದಿ ಪೈಕಿ ಹಾಜರಾದವರು 21127 ಮಂದಿ, 322 ಮಂದಿ ಗೈರಾಗಿದ್ದರು. ಮಲಯಾಳಂ ಪರೀಕ್ಷೆಗೆ 37 ಮದಿಯಲ್ಲಿ ಒಬ್ಬ ಮಾತ್ರ ಗೈರು. ಫ್ರೆಂಚ್ ಭಾಷೆ ಪರೀಕ್ಷೆಯಲ್ಲಿ 168ರಲ್ಲಿ 5 ಮಂದಿ ಗೈರಾಗಿದ್ದಾರೆ ಎಂದು ಪಿಯು ಬೋರ್ಡ್ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.
ರೈಲು ಡಿಕ್ಕಿ: ವ್ಯಕ್ತಿ ಸಾವು
ಮಂಗಳೂರು: ಪಡೀಲ್ ಮಂಗಳೂರು ರೈಲು ನಿಲ್ದಾಣಗಳ ಮಧ್ಯೆ ರೈಲು ಡಿಕ್ಕಿ ಹೊಡೆದು ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾನೆ. 55ರಿಂದ 60 ವರ್ಷ ಪ್ರಾಯ.
ಬುಧವಾರ ಸಂಜೆ 6.50ಕ್ಕೆ ಡಿಕ್ಕಿಯಾದ ಮಾಹಿತಿ ರೈಲು ಪೊಲೀಸರಿಗೆ ಲಭಿಸಿದೆ. ಉದ್ದಮುಖ, ಗಿಡ್ಡ ಮೂಗು, ಅಗಲ ಹಣೆ, ಎಣ್ಣೆಕೆಂಪು ಮೈಬಣ್ಳ, ಕಪ್ಪು ಬಿಳಿ ತಲೆ ಕೂದಲು, ಮೀಸೆ ಇದೆ, ಸಾಧಾರಣ ಮೈಕಟ್ಟು, ಬಿಳಿ ಬಣ್ಣದ ಗೆರೆಗಳು ಉಳ್ಳ ಅಂಗಿ ಧರಿಸಿದ್ದಾರೆ.
--