ರೇವಾ ವಿವಿಯಲ್ಲಿ ಕರ್ಣಾಟಕ ಬ್ಯಾಂಕ್ ವಿಸ್ತರಣಾ ಕೇಂದ್ರ
ಮಂಗಳೂರು: ಬೆಂಗಳೂರಿನ ರೇವಾ ವಿಶ್ವವಿದ್ಯಾಲಯದಲ್ಲಿ ಕರ್ಣಾಟಕ ಬ್ಯಾಂಕಿನ ವಿಸ್ತರಣಾ ಕೇಂದ್ರವನ್ನು ಮಂಗಳವಾರ ರೇವಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಶ್ಯಾಮ ರಾಜು ಉದ್ಘಾಟಿಸಿದರು. ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಮ ಭಟ್, ಮಹಾ ಪ್ರಬಂಧಕ ಮಹಾಬಲೇಶ್ವರ ಭಟ್, ಬೆಂಗಳೂರು ಪ್ರಾದೇಶಿಕ ಕಚೇರಿಯ ಉಪಮಹಾಪ್ರಬಂಧಕ ರಾಘವೇಂದ್ರ ಭಟ್, ಸಹಾಯಕ ಮಹಾಪ್ರಬಂಧಕ ನಂದಕಿಶೋರ್, ಹುಣಸೇಮಾರನಹಳ್ಳಿ ಶಾಖಾ ಪ್ರಬಂಧಕ ಗಿರೀಶ್ ಉಪಾಧ್ಯ ಹಾಜರಿದ್ದರು.
ಎರಡು ಶಾಖೆ ಉದ್ಘಾಟನೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೊಡಿಗೇಹಳ್ಳಿಯಲ್ಲಿ ಕರ್ಣಾಟಕ ಬ್ಯಾಂಕಿನ 542ನೇ ಶಾಖೆಯನ್ನು ಬ್ಯಾಂಕಿನ ಮಹಾಪ್ರಬಂಧಕ ಮಹಾಬಲೇಶ್ವರ ಭಟ್ ಮಂಗಳವಾರ ಉದ್ಘಾಟಿಸಿದರು. ಶಾಖಾ ಪ್ರಬಂಧಕ ತ್ರಿಭುವನ್ ಹಾಜರಿದ್ದರು. ಹಾಸನ ಜಿಲ್ಲೆಯ ಜಾಜೂರಿನಲ್ಲಿ ಬ್ಯಾಂಕಿನ 544ನೇ ಶಾಖೆಯನ್ನು ಅರಸೀಕೆರೆ ತಹಸೀಲ್ದಾರ್ ಜಗದೀಶ್ ಉದ್ಘಾಟಿಸಿದರು. ಬ್ಯಾಂಕಿನ ಮಹಾಪ್ರಬಂಧಕ ಜೈರಾಮ್ ಹಂದೆ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕ ಮಂಜುನಾಥ್ ಭಟ್, ಶಾಖಾ ಪ್ರಬಂಧಕ ಸತ್ಯಜಿತ್ ಪೈ ಹಾಜರಿದ್ದರು.