ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಣಬೆ ಸಂಘದಿಂದ ವಂಚನೆ; ಇಂದು ಸದಸ್ಯರ ಸಭೆ

Rashmi Kasaragodu
Updated On : 29 Mar 2013, 1:27 am


ಸುಬ್ರಹ್ಮಣ್ಯ: ಕೆಲವು ಸಮಯಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಣಬೆ ಬೆಳೆಗಾರರ ಸಹಕಾರಿ ಸಂಘವೆಂದು ಸ್ಥಾಪಿಸಿ ಬಡವರಿಂದ ಕೋಟಿಗಟ್ಟಲೆ ಠೇವಣಿ ಹಣ ಸಂಗ್ರಹಿಸಿ ಜನರಿಗೆ ಮೋಸಗೊಳಿಸಿದ ಈ ಸಹಕಾರಿ ಸಂಘದ ವಿರುದ್ಧ ಕಾನೂನು ಸೇರಿದಂತೆ ಇನ್ನಿತರ ಕ್ರಮ ಜರುಗಿಸುವ ಕುರಿತು ಮಾ.29ರಂದು 10.30ಕ್ಕೆ ಸುಬ್ರಹ್ಮಣ್ಯದ ವೆಲಂಕಣಿ ಸಭಾಭವನದಲ್ಲಿ ಸದಸ್ಯರ ಸಭೆಯನ್ನು ಕರೆಯಲಾಗಿದೆ.
ಈ ಸಂಘದಲ್ಲಿ ಹಣ ತೊಡಗಿಸಿದ ಎಲ್ಲಾ ಸದಸ್ಯರು ಸಭೆಯಲ್ಲಿ ಭಾಗವಹಿಸುವಂತೆ ನೊಂದ ಗ್ರಾಹಕರ ಪರವಾಗಿ ಶಿವರಾಮ ಸಿ.ಎಚ್. ಪರಮಲೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಂಘದ ಹೆಸರಿನಲ್ಲಿ ಕರಪತ್ರಗಳನ್ನು ಪ್ರಕಟಿಸಿ ಮುಗ್ಧ ಜನರಿಗೆ ಸುಳ್ಳು ಆಶ್ವಾಸನೆ ನೀಡಿ ವಿವಿಧ ಕಂತುಗಳಲ್ಲಿ ಅವರಿಂದ ಹಣ ಪಡೆದು ಸಾಲ ಸೌಲಭ್ಯಗಳನ್ನು ನೀಡುವುದಾಗಿ ಹೇಳಿ ನಂಬಿಸಿ ಇದೀಗ ತಲೆಮರೆಸಿಕೊಂಡಿರುವ ಕುರಿತು ಸಂಶಯ ಕಂಡು ಬರುತ್ತದೆ.
ಈ ಬಗ್ಗೆ ಸಂಘದ ಮುಖ್ಯ ಸಂಸ್ಥಾಪಕ ಬೆಂಗಳೂರಿನ ಮಾಲೂರು ಮೂಲದ ಎಸ್. ವೆಂಕಟೇಶ್ ಗುರೂಜೀ, ಮುಖ್ಯ ಸ್ಥಾಪಕ ಪ್ರಚಾರಕ ಕೇಶವ ಗೌಡ ಪಿ., ಮುಖ್ಯ ಸ್ಥಾಪಕ ಪ್ರಚಾರಕ ಕೆ.ಎನ್. ಕೃಷ್ಣಕುಮಾರಿ ವಿರುದ್ಧ ಈಗಾಗಲೇ ಪೊಲೀಸ್ ದೂರು ನೀಡಲಾಗಿದೆ. ಮುಂದಿನ ಕ್ರಮಗಳ ಕುರಿತು ಸದಸ್ಯರ ಸಮ್ಮುಖದಲ್ಲಿ ಚರ್ಚಿಸಿ ಮುಂದುವರಿಯಲಾಗುವುದು. ಆದ್ದರಿಂದ ಹಣ ತೊಡಗಿಸಿ ಮೋಸ ಹೋದ ಎಲ್ಲ ಸದಸ್ಯರೂ ರಶೀದಿಯೊಂದಿಗೆ ಸಭೆಗೆ ಹಾಜರಾಗುವುಂತೆ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement