ಇಂದಿನಿಂದ ಹೈದ್ರೋಸ್ ತಂಙಳ್ರ ಸ್ಮರಣಾ ದಿನಾಚರಣೆ
ಮಂಗಳೂರು: ಮಲ್ಲೂರಿನ ಉದ್ದಬೆಟ್ಟು ಜುಮಾ ಮಸೀದಿಯಲ್ಲಿ ಹೈದ್ರೋಸ್ ತಂಙಳ್ರ 11ನೇ ಸ್ಮರಣಾ ದಿನಾಚರಣೆ ನೇರ್ಚೆ ಮಾ.29ರಿಂದ ಏ.7ರ ವರೆಗೆ ನಡೆಯಲಿದೆ.
29ರಂದು ಉದ್ಘಾಟನೆಯಾಗಿ ಏ. 4ರಂದು ಸ್ವಲಾತ್ ವಾರ್ಷಿಕ, 6ರಂದು ಸೌಹಾರ್ದ ಸಂಗಮ ನಡೆಯುವುದು. 29ರಿಂದ ಪ್ರತಿದಿನ ರಾತ್ರಿ 9ಕ್ಕೆ ಮತ ವಿದ್ವಾಂಸರಿಂದ ಮತಪ್ರಭಾಷಣ ನಡೆಯುವುದು ಎಂದು ಮಸೀದಿ ಅಧ್ಯಕ್ಷ ಮಹಮ್ಮದ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.