ಉಚ್ಚಾಟನೆ ಆದೇಶ ಬಂದಿಲ್ಲ: ಅಸ್ಲಂ
ಮಂಗಳೂರು: 'ನಾನಿನ್ನು ಜೆಡಿಎಸ್ನಲ್ಲಿಯೇ ಇದ್ದೇನೆ, ನನ್ನನ್ನು ಉಚ್ಚಾಟಿಸಿ ಜೆಡಿಎಸ್ ಕಾರ್ಯಾಧ್ಯಕ್ಷರು ಹೊರಡಿಸಿದ ಆದೇಶ ನನಗೆ ತಲುಪಿಲ್ಲ' ಎಂದು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಉಚ್ಚಾಟಿತ ಅಧ್ಯಕ್ಷ ಡಿ.ಎಂ.ಅಸ್ಲಂ ಹೇಳಿದರು. ಜೆಡಿಎಸ್ ಹೈಕಮಾಂಡ್ ಬಳಿ ನನ್ನ ಉಚ್ಚಾಟನೆ ಬಗ್ಗೆ ಕೇಳಿದರೆ ಹಾಗೇನು ಇಲ್ಲ ಎಂದೇ ಹೇಳುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕುದ್ರೋಳಿ, ಬಂದರು ವಾರ್ಡ್ನಲ್ಲಿ ಜೆಡಿಎಸ್ ಗೆಲವಿಗೆ ಪ್ರಯತ್ನಿಸಿದ್ದೆ. ಬೇರೆ ಪಕ್ಷಕ್ಕೆ ಹೋಗುವುದಿಲ್ಲ, ಇಲ್ಲಿದ್ದೇ ನ್ಯಾಯಕ್ಕೆ ಹೋರಾಡುತ್ತೇನೆ. ಕಾಂಗ್ರೆಸ್ ಬಿಟ್ಟಿದ್ದ ಎಂ.ಜಿ. ಹೆಗಡೆ ಜೆಡಿಎಸ್ಗೆ ಸೇರುವಂತೆಕುಮಾರ ಸ್ವಾಮಿಯನ್ನು ಒಪ್ಪಿಸಿದ್ದು ನಾನೆ. ಸುಶೀಲ್ ನರೊನ್ಹಾಗೆ ಈ ಬಗ್ಗೆ ಏನೂ ತಿಳಿದಿಲ್ಲ. ಸುಶೀಲ್ ಬಿಟ್ಟು, ಅವರ ಕುಟುಂಬ ಕಾಂಗ್ರೆಸ್ನಲ್ಲಿದೆ. ಅವರು ಪಕ್ಷಕ್ಕಾಗಿ ನಯಾ ಪೈಸೆ ದುಡಿಯುತ್ತಿಲ್ಲ ಎಂದರು.