ಉನ್ನತ ತನಿಖೆಗೆ ಸಿದ್ಧ: ಮಸೀದಿ ಅಧ್ಯಕ್ಷ
ಮಂಗಳೂರು: ಬೈಕಂಪಾಡಿಯ ಮೊಹಿಯುದ್ದೀನ್ ಜುಮಾ ಮಸೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಲೆಕ್ಕಪತ್ರಗಳ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಜಮಾತ್ ಆಡಳಿತ ಸಿದ್ಧವಿದೆ ಎಂದು ಮಸೀದಿ ಅಧ್ಯಕ್ಷ ಎನ್.ಬಿ.ಅಬೂಬಕ್ಕರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾಜಿ ಅಧ್ಯಕ್ಷ ಜಬ್ಬಾರ್, ಇತರರು ಮಾಡಿದ ಆರೋಪ ಜಮಾತ್ ವಿರೋಧಿಯಾಗಿದೆ. ತನ್ನ ಅಂಗರಕ್ಷಕ ಸಿಬ್ಬಂದಿ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿ ತಾನು ಯಾರ ವಿರುದ್ಧವೂ ಸುಳ್ಳು ದೂರು ನೀಡಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯನ್ನು ಆಗ್ರಹಿಸುವುದಾಗಿ ನುಡಿದರು. ಕಾರ್ಯದರ್ಶಿ ಮಹಮ್ಮದ್ ಸಲಾಂ, ಜತೆ ಕಾರ್ಯದರ್ಶಿ ಮಹಮ್ಮದ್ ರಫೀಕ್, ಕೋಶಾಧಿಕಾರಿ ಮಹಮ್ಮದ್ ಬಶೀರ್ ಹಾಜರಿದ್ದರು.