ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

Rashmi Kasaragodu
Updated On : 29 Mar 2013, 1:33 am

ಮಂಗಳೂರು: ಕೊಣಾಜೆ ನಡುಪದವು ಪಿ.ಎ.ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿನಿ ಕಾಲೇಜ್ ಹಾಸ್ಟೆಲ್ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಘಟನೆ ಗುರುವಾರ ನಡೆದಿದೆ. ಶಿವಮೊಗ್ಗದ ಮೂಲದ, ವಿವಾಹಿತೆ ಸ್ವಾತಿ (22) ಮೃತರು. ಈಕೆ ಅಂತಿಮ ವರ್ಷದ ಎಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದರು. ಕಾಲೇಜಿನ ಹಾಸ್ಟೆಲ್ನಲ್ಲಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಮುನ್ನ ಬರೆದಿಟ್ಟ ಡೆತ್ನೋಟ್ನಲ್ಲಿ, ತನ್ನ ಸಾವಿಗೆ ಯಾರೂ ಕಾರಣರಲ್ಲ. ಗಂಡ ಒಳ್ಳೆಯವರು, ಅತ್ತೆ ಮಾವ ಕೂಡಾ ಒಳ್ಳೆಯವರು, ಯಾರೂ ಕಿರುಕುಳ ಕೊಟ್ಟಿಲ್ಲ. ಆದರೆ ಇತ್ತೀಚೆಗೆ ಕೋರ್ಸ್ನಲ್ಲಿ ಅತಿ ಕಡಿಮೆ ಅಂಕ ಬರುತ್ತಿದ್ದು, ತೇರ್ಗಡೆಯಾಗುವುದು ಕಷ್ಟ ಎಂದು ಕಂಡುಬಂದಿದ್ದು ಹಾಗಾಗಿ ಆತ್ಮಹತ್ಯೆ  ಮಾಡಿಕೊಂಡಿದ್ದಾಗಿ ಬರೆದಿದ್ದಾಗಿ ತಿಳಿದುಬಂದಿದೆ.

ಟಿಪ್ಪರ್ ಡಿಕ್ಕಿ: ಸಹಸವಾರ ಸಾವು
ಮಂಗಳೂರು: ಟಿಪ್ಪರ್ ಲಾರಿ ಡಿಕ್ಕಿಯಾಗಿ ಬೈಕ್ ಸಹಸವಾರ ಮೃತಪಟ್ಟ ಘಟನೆ ಬಜ್ಪೆ ಕಂದಾವರ ಬಳಿ ಗುರುವಾರ ಸಂಭವಿಸಿದೆ. ಕುಪ್ಪೆಪದವಿನ  ಭಾಸ್ಕರ (31) ಮೃತರು. ಟಿಪ್ಪರ್ ಲಾರಿ ಬೈಕ್ಗೆ ಮುಖಾಮುಖಿ ಡಿಕ್ಕಿಯಾಗಿದ್ದು ಬೈಕ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ಸಹಸವಾರ ಭಾಸ್ಕರ ಸ್ಥಳದಲ್ಲೇ ಮೃತಪಟ್ಟರು.

ಅಮಲು ಪದಾರ್ಥ ಸೇವನೆ: ವ್ಯಕ್ತಿ ಸಾವು
ಮೂಲ್ಕಿ: ಅಮಲು ಪದಾರ್ಥ ವಿಪರೀತ ಸೇವಿಸಿ ವ್ಯಕ್ತಿ ಮೃತಪಟ್ಟ ಘಟನೆ ಕಿನ್ನಿಗೋಳಿಯಲ್ಲಿ ಸಂಭವಿಸಿದೆ. ಏಳಿಂಜೆಯಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಕೃಷ್ಣ ಮೂಲ್ಯ (60) ಮೃತರು. ಇವರು ಬುಧವಾರ ಸಂಜೆ ಅಮಲು ಪದಾರ್ಥ ಸೇವಿಸಿ ಅರೆಪ್ರಜ್ಞಾವಸ್ಥೆಯಲ್ಲಿ ಕಿನ್ನಿಗೋಳಿಯ ಬಸ್ ನಿಲ್ದಾಣದ ಬಳಿ ಬಿದ್ದಿದ್ದು ಇವರನ್ನು ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭದ್ರತಾ ಸಿಬ್ಬಂದಿ ಹಲ್ಲೆ: ವ್ಯಕ್ತಿ ಸಾವು
ಮಣಿಪಾಲ: ಇಲ್ಲಿನ ಶಿವಳ್ಳಿ ಗ್ರಾಮದ ಕೆ.ಎಂ.ಸಿ ಗ್ರೀನ್ಸ್ ಪಾರ್ಕ್ನಲ್ಲಿ ಸೆಕ್ಯೂರಿಟಿ ಗಾರ್ಡ್ಗಳು ವ್ಯಕ್ತಿಯೋರ್ವನಿಗೆ ಹಲ್ಲೆ ನಡೆಸಿ ವ್ಯಕ್ತಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಕುಮಾರ್ ಮೃತರು.
 ಇವರು ಗ್ರೀನ್ಸ್ ಪಾರ್ಕ್ ಒಳಗಡೆ ಹೋಗುವ ಸಂದರ್ಭ ಅಲ್ಲಿಯೇ ಇದ್ದ ಇಬ್ಬರು ಸೆಕ್ಯೂರಿಟಿ ಗಾರ್ಡ್ಗಳು ಒಳಗಡೆ ಬರಬಾರದೆಂದು ಕುಮಾರನ್ನು ತಡೆದು, ಕೋಲಿನಿಂದ ಹೊಡೆದು ಹಲ್ಲೆ ನಡೆಸಿದ್ದಾರೆ.   ಹಲ್ಲೆಗೊಳಗಾದ ಕುಮಾರ್ ಅವರನ್ನು ಗಮನಿಸಿದ ಸಂತೋಷ್ ಅವರು ಇನ್ನಿತರರ ಸಹಾಯದೊಂದಿಗೆ ಕೆ.ಎಂ.ಸಿ. ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂಬುದಾಗಿ ಸಂತೋಷ್ ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನೆಲ್ಯಾಡಿ: ಮನೆಗೆ ನುಗ್ಗಿ ಚಿನ್ನಾಭರಣ ಕಳವು
ಉಪ್ಪಿನಂಗಡಿ: ನೆಲ್ಯಾಡಿಯ ಕೆರೆಬೈಲು ಎಂಬಲ್ಲಿ ಮನೆಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಮೂರು ಲಕ್ಷಕ್ಕೂ ಮಿಕ್ಕಿದ ಮೌಲ್ಯದ ಚಿನ್ನಾಭರಣಗಳ ಸಹಿತ ನಗ ನಗದನ್ನು ಕದ್ದೊಯ್ದು ಘಟನೆ ಕಳೆದ ಬುಧವಾರ ರಾತ್ರಿ  ನಡೆದಿದೆ. ಜೆ.ಕೆ. ವೈಂಡರ್ಸ್ ಎಂಬ ಎಲೆಕ್ಟ್ರಿಕಲ್ ದುರಸ್ತಿಯ ಅಂಗಡಿ ಹೊಂದಿದ್ದ ಜಿ.ಕೆ. ಗಣಪತಿ ಭಟ್ ತಮ್ಮ ಮನೆಯಿಂದ ಅನತಿ ದೂರದಲ್ಲೇ ಕಾಂಪೌಂಡ್ವೊಂದರ ಮಹಡಿಯ ಮೇಲೆ ಇರುವ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದರು. ಬುಧವಾರದಂದು ಕುಟುಂಬ ಸಮೇತ ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಧಾರ್ಮಿಕ ಕಾರ್ಯ ನಿಮಿತ್ತ ತೆರಳಿದ್ದರು.
ಇವರ ಒಬ್ಬ ಮಗ ಮತ್ತು ಸೊಸೆ ಕೂಡಾ ಇವರೊಂದಿಗೆ ತೆರಳಿದ್ದರು. ಇನ್ನೋರ್ವ ಮಗ ಪ್ರಫುಲ್ಲಚಂದ್ರ ಯಕ್ಷಗಾನ ಭಾಗವತರಾಗಿದ್ದು, ಬುಧವಾರ ರಾತ್ರಿ ಸುಬ್ರಹ್ಮಣ್ಯ ಕಡೆ ನಡೆದ ಯಕ್ಷಗಾನ ಮುಗಿಸಿ ಗುರುವಾರ ಬೆಳಗ್ಗೆ ನೆಲ್ಯಾಡಿಗೆ ಆಗಮಿಸಿದ್ದಾರೆ. ಬುಧವಾರ ರಾತ್ರಿ ಮನೆಯಲ್ಲಿ ಯರೂ ಇಲ್ಲದಿರುವುದನ್ನು ಖಾತ್ರಿ ಪಡಿಸಿಕೊಂಡ ಕಳ್ಳರು ಮುಂಬಾಗಿಲ ಬೀಗ ಒಡೆದು ಒಳ ಪ್ರವೇಶಿಸಿದ್ದಾರೆ. ಕಪಾಟಿನಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನ ಬೆಳ್ಳಿಯಾಭರಣಗಳನ್ನು ಕದ್ದೊಯ್ದಿದ್ದಾರೆ.
ಸ್ಥಳಕ್ಕೆ  ಉಪ್ಪಿನಂಗಡಿ ವೃತ್ತ ನಿರೀಕ್ಷಕ ಸುರೇಶ್ ಕುಮಾರ್ ಮತ್ತು ಉಪನಿರೀಕ್ಷಕ ರವಿ ನೇತೃತ್ವದ ಪೊಲೀಸ್ ತಂಡ ಪರಿಶೀಲನೆ ನಡೆಸಿದ್ದು, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement