'ನಗೆಯಾಡಿ ನಿರೋಗಿಯಾಗಿ' ಇಂದು ಕೃತಿ ಬಿಡುಗಡೆ
ಮೂಲ್ಕಿ: ಕಿನ್ನಿಗೋಳಿಯ ಯುಗಪುರುಷದ ಪ್ರಕಟಣಾಲಯದಿಂದ ಪ್ರಕಟಿತ 491ನೇ ಕೃತಿ ಸದಾನಂದ ಹೆಗಡೆಕಟ್ಟೆ ರಚಿತ 'ನಗೆಯಾಡಿ ನಿರೋಗಿಯಾಗಿ' ಬಿಡುಗಡೆ ಸಮಾರಂಭ ಶುಕ್ರವಾರ ಬೆಳಗ್ಗೆ ಕಿನ್ನಿಗೋಳಿಯ ಯುಗಪುರುಷದ ಸಭಾಭವನದಲ್ಲಿ ಜರುಗಲಿದೆ.
ಮೂಡುಬಿದಿರೆ ಎಸ್ಕೆಎಫ್ ಆಡಳಿತ ನಿರ್ದೇಶಕ ರಾಮಕೃಷ್ಣ ಆಚಾರ್ಯ ಕೃತಿ ಬಿಡುಗಡೆಗೊಳಿಸಲಿದ್ದು ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದಾರೆ.
ಸಾಹಿತಿಗಳಾದ ಕೆ.ಜಿ.ಮಲ್ಯ ಕಿನ್ನಿಗೋಳಿ, ಉದಯ ಕುಮಾರ ಹಬ್ಬು, ಉಮೇಶ್ ರಾವ್ ಎಕ್ಕಾರು, ಗೋವರ್ಧನ ಹೊಸ್ಮನಿ ಭಾಗವಹಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.