ಪ್ರೀಮಿಯಂ ಏರಿಕೆಗೆ ಬಸ್ ಮಾಲೀಕರ ಆಕ್ಷೇಪ
ಮಂಗಳೂರು: ಬಸ್ ಓಡಾಟಕ್ಕೆ ಸಂಬಂಧಿಸಿ ಮೂರನೇ ಪಾರ್ಟಿ ಇನ್ಸೂರೆನ್ಸ್ನ ಪ್ರೀಮಿಯಂನ್ನು ಏಕಾಏಕಿ ಹೆಚ್ಚಳಗೊಳಿಸಿದ ಇನ್ಸೂರೆನ್ಸ್ ರೆಗ್ಯುಲೇಟರಿ ಡೆವಲಪ್ಮೆಂಟ್ ಅಥಾರಿಟಿ(ಐಆರ್ಡಿಎ)ಕ್ರಮಕ್ಕೆ ಕೆನರಾ ಬಸ್ ಮಾಲಕರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಏ.1ರಿಂದ ಮೂರನೇ ಪಾರ್ಟಿ ಪ್ರೀಮಿಯಮ್ನಲ್ಲಿ ಶೇ.46 ಹೆಚ್ಚಳ ಮಾಡಲಾಗಿದೆ. ಇದುವರೆಗೆ ರು. 29,836 ಮೊತ್ತ ಇದ್ದುದು ಇನ್ನು ರು. 43,575 ಆಗಲಿದೆ. ಇಷ್ಟೊಂದು ಮೊತ್ತವನ್ನು ಏರಿಕೆ ಮಾಡಿರುವುದು ಸರಿಯಲ್ಲ. ಬಸ್ಸಿನಲ್ಲಿ 50 ಮಂದಿ ಪ್ರಯಾಣಿಕರಿಗೆ ತಲಾ ರು. 583 ರಂತೆ ಹೆಚ್ಚಳ ಮಾಡಿದಂತಾಗಿದೆ. ಈ ಪ್ರೀಮಿಯಂ ಏರಿಕೆಯನ್ನು ಕೂಡಲೇ ಹಿಂದಕ್ಕೆ ಪಡೆಯುವಂತೆ ಅವರು ಆಗ್ರಹಿಸಿದರು.