ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

'ಬ್ಲೂಫಿಲ್ಮ್' ಹಗರಣ

Rashmi Kasaragodu
Updated On : 29 Mar 2013, 1:29 am

ಸುಭಾಶ್ಚಂದ್ರ ಎಸ್. ವಾಗ್ಳೆ
ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ಒಂದೆಡೆ ತೀವ್ರ ಮುಜುಗರಪಟ್ಟುಕೊಳ್ಳುತ್ತಿದೆ, ಇನ್ನೊಂದೆಡೆ ಸಮಸ್ಯೆ ಬಗೆಹರಿದ ನಿರಾಳತೆಯನ್ನೂ ಅನುಭವಿಸುತ್ತಿದೆ, ಜೊತೆಗೆ ಮುಂದೇನು ಎನ್ನುವ ಹೊಸ ತಲೆನೋವನ್ನು ಹೊತ್ತುಕೊಂಡಿದೆ.
 ಉಡುಪಿ ಶಾಸಕ ಕೆ. ರಘುಪತಿ ಭಟ್ಟರದ್ದೆನ್ನಲಾದ ಬ್ಲೂಫಿಲಂ ಸಿ.ಡಿ.ಯೊಂದು ಗುರುವಾರ ಬಯಲಾಗಿದೆ. ಉಡುಪಿಯಲ್ಲಿ ಪಡ್ಡೆ ಹುಡುಗರ ಮೊಬೈಲ್ನಲ್ಲಿ ಈ ಬ್ಲೂಫಿಲಂ ಹರಿದಾಡುತ್ತಿದೆ. ಟಿ.ವಿ. ಚಾನೇಲ್ಗಳಲ್ಲೂ ಬಿತ್ತರವಾಗಿದೆ. ಈ ಹಿನ್ನೆಲೆಯಲ್ಲಿ ತೀವ್ರ ಮುಖಭಂಗಕ್ಕೊಳಗಾದ ಭಟ್ಟರು ಮುಂಬರುವ ವಿಧಾನಸಭಾ ಚುನಾವಣೆಯಿಂದಲೇ ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ.
 ಭಟ್ಟರ ನಿವೃತ್ತಿ ಘೋಷಣೆ ಜಿಲ್ಲಾ ಬಿಜೆಪಿಯ ಮಟ್ಟಿಗೆ ಬಯಸಿದ್ದು ಕಾಲಿಗೆ ತೊಡರಿದಂತಾಗಿದೆ. ರಘುಪತಿ ಭಟ್ಟರಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಟಿಕೇಟು ನೀಡುವುದಕ್ಕೆ ಬಿಜೆಪಿಗೆ ಮನಸ್ಸಿರಲಿಲ್ಲ. ಅದಕ್ಕಾಗಿ ಅನೇಕ ದಿನಗಳಿಂದ ಪರ್ಯಾಯ ಅಭ್ಯರ್ಥಿಯ ಹುಡುಕಾಟ ತೀವ್ರವಾಗಿ ನಡೆಯುತ್ತಿತ್ತು. ಆದರೆ ಉಡುಪಿಯಿಂದ 2 ಬಾರಿ ಗೆದ್ದಿರುವ ಶಾಸಕ ರಘುಪತಿ ಭಟ್ಟರನ್ನು ಪಕ್ಕಕ್ಕೆ ಸರಿಸುವುದು ಬಿಜೆಪಿಗೆ ಅಷ್ಟು ಸುಲಭದ ಕೆಲಸವಾಗಿರಲಿಲ್ಲ.
ಗುರುವಾರ ನಡೆದಿದ್ದಿಷ್ಟು: ಗುರುವಾರ ಟಿವಿ ಚಾನೆಲ್ಗಳಲ್ಲಿ ಭಟ್ಟರಂತೆ ಕಾಣುವ ವ್ಯಕ್ತಿಯೊಬ್ಬ ನೇಪಾಳಿ ಕಾಲ್ಗರ್ಲ್ ಜೊತೆಗೆ ಹೊಟೇಲಿನ ರೂಮಿನಲ್ಲಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ, ಫೆ. 11ರಂದು  ಚಿತ್ರೀಕರಣಗೊಂಡಿರುವ 'ಬ್ಲೂಫಿಲಂ' ಬಗೆಗಿನ ಸುದ್ದಿ ಪ್ರಸಾರವಾಯಿತು. ತಕ್ಷಣ ರಘುಪತಿ ಭಟ್ಟರು 'ಸುವರ್ಣ ವಾಹಿನಿ'ಯಲ್ಲಿ ತಾನಿನ್ನು ಮುಂದಿನ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ಘೋಷಿಸಿದರು.
 ಈ ಘೋಷಣೆಯಿಂದ ಬಿಜೆಪಿಯ ಸಮಸ್ಯೆ ಅನಾಯಾಸವಾಗಿ ಬಗೆಹರಿಯಿತು. ರಘುಪತಿ ಭಟ್ಟರಿಗೆ ಉಡುಪಿ ವಿಧಾನಸಭಾ ಕ್ಷೇತ್ರದ ಟಿಕೇಟು ನಿರಾಕರಿಸುವುದಕ್ಕೆ ಕಾರಣ ಹುಡುಕುತಿದ್ದ ಬಿಜೆಪಿಗೆ ಭಟ್ಟರು ತಾನಾಗಿಯೇ ಟಿಕೇಟು ಬೇಡ ಎಂದದ್ದು ಬಹುದೊಡ್ಡ ಸಮಸ್ಯೆಯೊಂದು ಬಗೆಹರಿದಿದೆ.
 ಆದರೆ ತಮ್ಮ ಶಾಸಕರೊಬ್ಬರು ತಮ್ಮ ಖಾಸಗಿ ಬದುಕಿನಲ್ಲಿ ನಡೆಸಿದ್ದಾರೆನ್ನಲಾದ ಕಾಮಕೇಳಿಯ ದೃಶ್ಯಗಳು ಬಯಲಾಗಿದ್ದು ಬಿಜೆಪಿಗೆ ತೀವ್ರ ಮುಜುಗರಕ್ಕೂ ಕಾರಣವಾಗಿದೆ. ಇದು ಚುನಾವಣೆಯಲ್ಲಿ ವಿರೋಧ ಪಕ್ಷಗಳ ಬಾಯಿಗೆ ಕೊಟ್ಟ ಕವಳವಾಗುವ ಭಯವೂ ಇದೆ.
ಈಗ ಹೊಸ ತಲೆನೋವು: ಇದರ ಜೊತೆಗೆ ಭಟ್ಟರ ಜಾಗದಲ್ಲಿ ಬೇರೆ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಾಗಿದೆ. ಉಡುಪಿಯಲ್ಲಿ 400 ಕೋಟಿ ರು.ಗೂ ಹೆಚ್ಚು ಅಭಿವೃದ್ದಿ ಮಾಡಿದ್ದೇನೆಂದು ಹೇಳುವ ಭಟ್ಟರಂತಹ ಶಾಸಕರಿದ್ದೂ ಉಡುಪಿ ನಗರಾಡಳಿತ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ಎದುರಲ್ಲಿ ಮುಖಭಂಗ ಅನುಭವಿಸಿದೆ. ಹಾಗಿರುವ ಬಿಜೆಪಿ ಭಟ್ಟರಿಗಿಂತಲೂ ಪ್ರಬಲ ಅಭ್ಯರ್ಥಿ ಬಿಜೆಪಿಗೆ ತುರ್ತಾಗಿ ಬೇಕಾಗಿದೆ. ಇದು ಬಿಜೆಪಿಗೆ ಹೊಸ ತಲೆನೋವಾಗಿದೆ.



ಟಿಕೆಟ್ ನಿರಾಕರಣೆ ನಿರ್ಧಾರ

ಭಟ್ಟರು ಉಡುಪಿಯಲ್ಲಿ 2 ಬಾರಿ ಶಾಸಕರಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ, ಅವರ ಪತ್ನಿ ಪದ್ಮಪ್ರಿಯ ನಿಗೂಢವಾಗಿ ದೆಹಲಿಯಲ್ಲಿ ಸಾವಿನನ್ನಪ್ಪಿದ ಪ್ರಕರಣ, ಸೈಂಟ್ಮೇರಿಸ್ ದ್ವೀಪದಲ್ಲಿ ನಡೆಸಿದ ಮುಕ್ತ ಕಾಮಕೇಳಿಯ ರೇವು ಪಾರ್ಟಿ, ಶಾಸಕರ ಹಿಂಬಾಲಕರು ನಗರಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತದ್ದು, ಮಂಗಳೂರಿನ ಆರ್ಎಸ್ಎಸ್ ಶಕ್ತಿ ಕೇಂದ್ರದ ಹಿಡಿತದಲ್ಲಿರುವ ಉಡುಪಿ ಜಿಲ್ಲಾ ಬಿಜೆಪಿ ಅವರಿಗೆ ಈ ಬಾರಿ ಟಿಕೇಟು ಕೊಡಬಾರದು ಎಂದು ನಿರ್ಧಾರಕ್ಕೆ ಬರುವುದಕ್ಕೆ ಕಾರಣವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement