ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಶಿಕ್ಷಕಿಯರ ಒಳಜಗಳ; ನೊಂದ ವಿದ್ಯಾರ್ಥಿಗಳ ಉಪವಾಸ!

Rashmi Kasaragodu
Updated On : 29 Mar 2013, 1:32 am

ಉಪ್ಪಿನಂಗಡಿ: ಶಿಕ್ಷಕಿಯರಿಬ್ಬರ ವೈಮನಸ್ಸು ಎಳೆಯ ಮಕ್ಕಳ ಮುಂದೆ ಪ್ರಕಟಗೊಂಡ ಪರಿಣಾಮ ದುಃಖಿತ ವಿದ್ಯಾರ್ಥಿಗಳು ಮಧ್ಯಾಹ್ನದ ಊಟ ಬಹಿಷ್ಕರಿಸಿ ಉಪವಾಸ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕು ಕರಾಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಬೇರೆ ಬೇರೆ ಕ್ಲಾಸ್ನ ಇಬ್ಬರು ಕ್ಲಾಸ್ ಟೀಚರ್ ನಡುವೆ ಯಾವುದೋ ವಿಚಾರಕ್ಕೆ ಸಂಬಂಧಿಸಿ ವೈಮನಸ್ಸು ಇತ್ತು. ಇದರಿಂದಾಗಿ ಶಾಲಾ ವಿದ್ಯಾರ್ಥಿನಿ ನಾಯಕಿಯನ್ನು ಛೂ ಬಿಟ್ಟು ಐದನೇ ತರಗತಿಯ ಕ್ಲಾಸ್ ಟೀಚರ್ ಮೇಲೆ ನಿಂದನೆಯ ನುಡಿಗಳನ್ನಾಡಿಸಿದರೆನ್ನಲಾಗಿದೆ.   ಇದರಿಂದ ಮನ ನೊಂದ 5ನೇ ತರಗತಿ ಕ್ಲಾಸ್ ಟೀಚರ್ ಶಾಲಾ ಮಕ್ಕಳ ಮುಂದೆಯೇ ಕಣ್ಣೀರಿಟ್ಟು ಅತ್ತಿದ್ದರು. ಮಾತ್ರವಲ್ಲ, ಮಧ್ಯಾಹ್ನದ ಊಟವನ್ನೂ ಮಾಡದೇ ಮೌನಿಯಾಗಿದ್ದರು. ಇದನ್ನು ಕಂಡ ಆ ತರಗತಿಯ ವಿದ್ಯಾರ್ಥಿಗಳು ಶಿಕ್ಷಕಿ ಕುರಿತು ತಮ್ಮ ಅನುಕಂಪ ವ್ಯಕ್ತಪಡಿಸಿ ತಾವೂ ಕೂಡಾ ಊಟ ಮಾಡದೇ ಅನ್ನ ಸತ್ಯಾಗ್ರಹ ನಡೆಸಿದರು.
ಶಿಕ್ಷಣಾಧಿಕಾರಿ ಭೇಟಿ: ವಿಷಯ ತಿಳಿದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಗುರುವಾರ ಶಾಲೆಗೆ ಭೇಟಿ ನೀಡಿ  ವಿದ್ಯಾರ್ಥಿಗಳನ್ನು ವಿಚಾರಿಸಿದಾಗ ಸತ್ಯ ಬಯಲಿಗೆ ಬಂತು.  ಮಕ್ಕಳ ಮನಸ್ಸಿಗೆ ಆಘಾತವಾಗುವ ರೀತಿಯಲ್ಲಿ ವರ್ತನೆ ತೋರದಂತೆ, ಸಹೋದ್ಯೋಗಿಗಳ ದಂಡನೆಗೆ ವಿದ್ಯಾರ್ಥಿಗಳನ್ನು ಬಳಸದಂತೆ ಶಿಕ್ಷಕರಿಗೆ ಎಚ್ಚರಿಕೆ ನೀಡಿ ಪ್ರಕರಣ ಕೊನೆಗೊಳಿಸಲಾಯಿತು.  ಬಳಿಕ, ಮಧ್ಯಾಹ್ನ 3ರ ಸುಮಾರಿಗೆ ವಿದ್ಯಾರ್ಥಿಗಳು ಭೋಜನ ಸ್ವೀಕರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement