ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಇಂದು ಕೂರ್ಮಾವತಾರ ಚಿತ್ರ ಪ್ರದರ್ಶನ

Vishwanath S
Updated On : 30 Mar 2013, 11:40 am

ಮಂಗಳೂರು: ಗಿರೀಶ್ ಕಾಸರವಳ್ಳಿ ನಿರ್ದೇಶನದ ಕೂರ್ಮಾವತಾರ ಕನ್ನಡ ಚಲನಚಿತ್ರ ಪ್ರದರ್ಶನವನ್ನು ಮಾ.30ರಂದು ಸಂಜೆ 5.30ಕ್ಕೆ ಶಾರದಾ ವಿದ್ಯಾಲಯ ಧ್ಯಾನ ಮಂದಿರದಲ್ಲಿ ನಡೆಯಲಿದೆ.
ಕರಾವಳಿ ಬೆಳ್ಳಿ ಮಂಡಲ ಫಿಲಂ ಸೊಸೈಟಿ, ಮಂಗಳೂರು ಭಾರತೀಯ ವಿದ್ಯಾಭವನ ಸಹಯೋಗದದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ವಿಜಯಕುಮಾರ್ ಕೊಡಿಯಾಲಬೈಲ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕುಂ.ವೀ. ಸಣ್ಣ ಕತೆ ಆಧರಿಸಿ, ಭಾಸ್ಕರನ್ ಚಿತ್ರೀಕರಿಸಿದ್ದು, 115 ನಿಮಿಷಗಳ ಚಿತ್ರದಲ್ಲಿ ಪ್ರೊ.ಶಿಕಾರಿಪುರ ಕೃಷ್ಣಮೂರ್ತಿ,ಉಮಾಶ್ರೀ ಜಯಂತಿ ಅಭಿನಯಸಿದ್ದಾರೆ. ಚಿತ್ರಕ್ಕೆ ಎರಡು ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಗಾಂಧಿ ತತ್ವವನ್ನು ಚಿತ್ರದಲ್ಲಿ ತೋರಿಸಲಾಗಿದ್ದು, ಪ್ರವೇಶ ಉಚಿತ. ಸಂವಾದಕ್ಕೂ ಅವಕಾಶ ವಿದೆ ಎಂದರು.
ಕಾರ್ಯದರ್ಶಿ ಪ್ರಕಾಶ್ ಶೆಣೈ, ಶಿಕಾರಿಪುರ ಕೃಷ್ಣಮೂತಿ, ಜತೆ ಕಾರ್ಯದರ್ಶಿ ನಿತ್ಯಾನಂದ ರಾವ್ ಇದ್ದರು.
ಪರೀಕ್ಷೆ ವೇಳೆ ವಿದ್ಯುತ್ ಕಡಿತಗೊಳಿಸಿದರೆ ಮುತ್ತಿಗೆ
ಮಂಗಳೂರು: ಎಸ್,ಎಸ್,ಎಲ್,ಸಿ ಪರೀಕ್ಷಾ ವೇಳೆ ವಿದ್ಯುತ್ ನಿಲುಗಡೆ ಮಾಡಿದರೆ ಮೆಸ್ಕಾಂಗೆ ಮುತ್ತಿಗೆ ಹಾಕುವುದಾಗಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಹೇಳಿದೆ.
ರಾತ್ರಿ ಸಮಯ ವಿದ್ಯುತ್ ನಿಲುಗಡೆ ಮಾಡುವುದರಿಂದ ಅನೇಕ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿಗೆ ತೊಂದರೆಯಾಗುತ್ತಿದೆ. ಜಿಲ್ಲೆಯಲ್ಲಿ ವಿಪರೀತ ಸೆಖೆ ಇರುವುದರಿಂದ ವಿದ್ಯುತ್ ನಿಲುಗಡೆಗೊಳಿಸಿದರೆ ಪರೀಕ್ಷೆ ತಯಾರಿ ನಡೆಸಲು ಅನಾನುಕೂಲವಾಗುತ್ತದೆ. ಏ.1ರಿಂದ ಎಸ್,ಎಸ್,ಎಲ್,ಸಿ, ಏ.8ರಿಂದ ಪದವಿ ಪರೀಕ್ಷೆ ಆರಂಭವಾಗಲಿದ್ದು, ಈ ಸಮಯ ವಿದ್ಯುತ್ ನಿಲುಗಡೆಗೊಳಿಸಿದರೆ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕುವುದಾಗಿ ವಿದ್ಯಾರ್ಥಿ ಸಂಘ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement