ಕೊನೆಯ ದಿನ ಮುಂದೂಡಿಕೆ
ಮಂಗಳೂರು: ಸುರತ್ಕಲ್ ಎನ್,ಐಟಿಕೆ ಮಾನವಿಕ, ಸಮಾಜ ವಿಜ್ಞಾನ ಹಾಗೂ ಪ್ರಬಂಧ ವಿಭಾಗವು 2013-15ನೇ ಸಾಲಿನ ಎಂಬಿಎ ಕಾರ್ಯಕ್ರಮಕ್ಕೆ ಅಭ್ಯರ್ಥಿಗಳನ್ನು ಪರಿಗಣಿಸುವ ದಿನವನ್ನು ಏ. 5ಕ್ಕೆ ಮುಂದೂಡಿದೆ. ಕ್ಯಾಟ್ ಅಂಕ, ಪ್ರಥಮ ದರ್ಜೆಯಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೊನೆಯ ವರ್ಷದ ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಆಸಕ್ತರು ಸಂಸ್ಥೆಯ ವೆಬ್,ಸೈಟ್-www.nitk.com ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಇಂದು ಕಬಡ್ಡಿ ಪಂದ್ಯಾಟ
ವಿಟ್ಲ: ಮಂಗಳಪದವು ಸೌಹಾರ್ದ ಫ್ರೆಂಡ್ಸ್ ಆಶ್ರಯದಲ್ಲಿ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಕಾರದೊಂದಿಗೆ ಜಯ ಕರ್ನಾಟಕ ಟ್ರೋಫಿ- 2013ರ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ ಶನಿವಾರ ಮಂಗಳಪದವು ಜಂಕ್ಷನ್,ನಲ್ಲಿ ನಡೆಯಲಿದೆ.ಬೆಳಗ್ಗೆ ಪಂದ್ಯಾಟವನ್ನು ಜಯಕರ್ನಾಟಕ ರಾಜ್ಯ ಸಂಚಾಲಕ, ದ.ಕ. ಜಿಲ್ಲಾ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ ಉದ್ಘಾಟಿಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸಂಘಟಕ ರಘು ಮಾಹಿತಿ ನೀಡಿದರು.