'ಮೂಲಭೂತ ಸಮಸ್ಯೆ ನಿವಾರಣೆಗೂ ಅಧಿಕಾರಿಗಳ ನೀತಿ ಸಂಹಿತೆ ಭೂತ'
ಮಂಗಳೂರು: ಕುಡಿಯುವ ನೀರು, ಬೀದಿ ದೀಪ ಸಮಸ್ಯೆ ನಿವಾರಣೆ ಬಗ್ಗೆ ಅಧಿಕಾರಿಗಳ ಬಳಿ ಹೇಳಿದರೆಚುನಾವಣೆ ನೀತಿ ಸಂಹಿತೆ ನೆಪ ಒಡ್ಡಿ ಕೆಲಸ ಮಾಡುತ್ತಿಲ್ಲ ಎಂದು ಶಾಸಕ ಯು.ಟಿ.ಖಾದರ್ ಆರೋಪಿಸಿದರು.
ಕೆರೆಬೈಲು, ಕಲ್ಲಾಪು, ಚೆಂಬುಗುಡ್ಡೆ ಮೊದಲಾದ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ಸಮಸ್ಯೆ ಬಗೆಹರಿಸಿದರೆ ಜನಪ್ರತಿನಿಧಿಗಳಿಗೆ ನೀತಿ ಸಂಹಿತೆ ಹೇಗೆ ಅಡ್ಡಬರುತ್ತದೆ ಎಂದರು.
ಅಧಿಕಾರಿಗಳು ಬೇಕೆಂದೇ ನೀತಿ ಸಂಹಿತೆ ನೆಪ ಒಡ್ಡುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸ್ಥಳೀಯ ಸಮಸ್ಯೆ ಪರಿಹಾರಕ್ಕೆ ಚುನಾವಣೆ ಆಯೋಗ ದೂರು ಕೇಂದ್ರಗಳನ್ನು ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಸ್ಥಾಪಿಸಬೇಕು. ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಕೊನೆ ದಿನಾಂಕ ಮಾ.31ನ್ನು ಚುನಾವಣೆ ಅನಂತರಕ್ಕೆ ವಿಸ್ತರಿಸಬೇಕು. ಅತಿಥಿ ಉಪನ್ಯಾಸಕರಿಗೆ ಶೀಘ್ರ ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಟಿ.ಕೆ.ಸುಧೀರ್, ಮೋಹನ್ ಮೆಂಡನ್, ಹೇಮಂತ್ ಪೂಜಾರಿ ಇದ್ದರು.