200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ
ಮಂಗಳೂರು: ಏ.1ರಿಂದ 10ರವರೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರ 200 ಮೀ.ಸುತ್ತಮುತ್ತ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಜಿಲ್ಲಾಧಿಕಾರಿ ಪ್ರಸ್ತಾವನೆ ಪರಿಶೀಲಿಸಿ ಪೊಲೀಸ್ ಕಮಿಷನರ್ ಮನಿಶ್ ಕರ್ಬಿಕರ್ ಆದೇಶ ಹೊರಡಿಸಿದ್ದಾರೆ. ನಿಷೇಧಿತ ಪ್ರದೇಶದಲ್ಲಿ ಅಭ್ಯರ್ಥಿಗಳ ಹೊರತು, ಸಾರ್ವಜನಿಕರು, ಐದು ಮಂದಿ ಯಾ ಅದಕ್ಕಿಂತ ಹೆಚ್ಚು ಮಂದಿ ಗುಂಪು ಗೂಡುವುದು, ತಿರುಗಾಡುವುದು ನಿಷೇಧಿಸಲಾಗಿದೆ. ನಕಲು ಮಾಡಲು ಸಹಾಯ ಮಾಡುವುದು, ಚೀಟಿ, ಇನ್ನಿತರ ರೀತಿ ಉತ್ತರ ಬರೆದು, ಇನ್ಯಾವುದೇ ವಸ್ತು ಹಂಚುವುದು, ರವಾನಿಸುವುದು ಸಂಪೂರ್ಣ ನಿಷೇಧಿಸಿದೆ. ಕ್ಷಾರಕ, ಸ್ಫೋಟಕ, ಇನ್ನಿತರ ಮಾರಕ ಆಯುಧ ಹೊಂದುವುದು, ಪರೀಕ್ಷೆಗೆ ಸಂಬಂಧಿಸಿ ಸಂಜ್ಞೆ ಮಾಡುವುದು ನಿಷೇಧಿಸಲಾಗಿದೆ.
ಏ.2ರಿಂದ ಪರೀಕ್ಷೆ ಆರಂಭವಾಗುತ್ತಿದೆ. ಪರೀಕ್ಷೆಯಲ್ಲಿ ಅಕ್ರಮಗಳಿಲ್ಲದೆ ಸುಗಮವಾಗಿ ನಡೆಯಲು ಮಾರ್ಗದರ್ಶಿ ಸೂತ್ರಗಳಿವೆ. ಈ ಮಾಗದರ್ಶಿ ಸೂತ್ರ ಕೇವಲ ಜಿಲ್ಲೆಗೆ ಸೀಮಿತವಾಗಿಲ್ಲ. ರಾಜ್ಯದ ಎಲ್ಲೆಡೆ ಇದು ಅನ್ವಯವಾಗುತ್ತದೆ. ಜಿಲ್ಲಾಧಿಕಾರಿಗಳು ಸುರಕ್ಷತೆ ದೃಷ್ಟಿಯಿಂದ ಮಾಗದರ್ಶಿ ಸೂತ್ರ ಪಾಲಿಸಿ, ಆದೇಶ ಹೊರಡಿಸಬೇಕು. ಪರೀಕ್ಷೆ ನಡೆಯವ ದಿನಗಳಷ್ಟು ಕಾಲ ಜೆರಾಕ್ಸ್ ಅಂಗಡಿ ಮುಚ್ಚಬೇಕು ಎಂದೇನು ಇಲ್ಲ. ಪರೀಕ್ಷೆ ನಡೆಯುವ 3 ಗಂಟೆ ಅವಧಿಯಲ್ಲಿ ಅಂಗಡಿ ಬಂದ್ ಮಾಡಿದರೆ ಸಾಕು.
ಟಿ ಹರ್ಷಗುಪ್ತ,
ಜಿಲ್ಲಾಧಿಕಾರಿ