ಇಂದಿನಿಂದ ಏರ್ಇಂಡಿಯಾ ಬೇಸಗೆ ಯಾನ
ಮಂಗಳೂರು: ಏರ್ ಇಂಡಿಯಾ ಎಕ್ಸ್ಪ್ರೆಸ್ ಮಾ.31ರಿಂದ ಬೇಸಗೆಯ ವಿಮಾನಯಾನ ವೇಳಾಪಟ್ಟಿ ಪ್ರಕಟಿಸಿದೆ.
ಮಂಗಳೂರಿನಿಂದ ಮಧ್ಯಾಹ್ನ 2 ಗಂಟೆಗೆ ಹೊರಟರೆ, ದುಬೈನಿಂದ ಹೊರಟ ವಿಮಾನ ಸಂಜೆ 5.25ಕ್ಕೆ ಮಂಗಳೂರಿಗೆ ಆಗಮಿಸಲಿದೆ. ಇನ್ನೊಂದು ವಿಮಾನ ರಾತ್ರಿ 8.05ಕ್ಕೆ ಮಂಗಳೂರಿನಿಂದ ಹೊರಟರೆ, ದುಬೈನಿಂದ ಹೊರಟ ವಿಮಾನ ಬೆಳಗ್ಗೆ 9.55ಕ್ಕೆ ಮಂಗಳೂರು ತಲಪಲಿದೆ.
ಏರ್ಇಂಡಿಯಾ ಎಕ್ಸ್ಪ್ರೆಸ್ ಪ್ರತಿ ಸೋಮವಾರ, ಬುಧವಾರ, ಶನಿವಾರ ಮಂಗಳೂರಿನಿಂದ ಕುವೈಟ್ಗೆ ಸಂಜೆ 6.25ಕ್ಕೆ ಹೊರಡಲಿದೆ. ಕುವೈಟ್ನಿಂದ ಪ್ರತಿ ಮಂಗಳವಾರ, ಗುರುವಾರ, ಭಾನುವಾರ ಮಂಗಳೂರಿಗೆ ವಿಮಾನ ಬೆಳಗ್ಗೆ 7.25ಕ್ಕೆ ಆಗಮಿಸಲಿದೆ. ಮಂಗಳೂರಿನಿಂದ ಅಬುದಾಬಿ-ಮಸ್ಕತ್ಗೆ ಮಂಗಳವಾರ, ಗುರುವಾರ, ಭಾನುವಾರ ಬೆಳಗ್ಗೆ 10.05ಕ್ಕೆ ವಿಮಾನ ಹೊರಡಲಿದ್ದು, ಮಸ್ಕತ್ನಿಂದ ಅದೇ ದಿನ ಮಂಗಳೂರಿಗೆ ರಾತ್ರಿ 7.55ಕ್ಕೆ ಆಗಮಿಸಲಿದೆ.
ಮಂಗಳೂರಿನಿಂದ ದಮಾಮ್ಗೆ ಬುಧವಾರ ಮತ್ತು ಶನಿವಾರ ಸಂಜೆ 5ಕ್ಕೆ ವಿಮಾನ ಹೊರಡಲಿದೆ. ದಮಾಮ್ನಿಂದ ಗುರುವಾರ, ಭಾನುವಾರ ಮಂಗಳೂರಿಗೆ ಸಂಜೆ 3.20ಕ್ಕೆ ವಾಪಾಸಾಗಲಿದೆ. ಮಂಗಳೂರಿನಿಂದ ದೋಹಾಕ್ಕೆ ಬೆಳಗ್ಗೆ 8ಕ್ಕೆ ಪ್ರತಿ ಶುಕ್ರವಾರ ವಿಮಾನ ಹೊರಟರೆ, ದೋಹಾದಿಂದ ಮಂಗಳೂರಿಗೆ ಅದೇ ದಿನ ಸಂಜೆ 5.10ಕ್ಕೆ ಆಗಮಿಸಲಿದೆ. ಮಂಗಳೂರಿನಿಂದ ಬಹರೈನ್ಗೆ ಪ್ರತಿ ಶನಿವಾರ ಬೆಳಗ್ಗೆ 11ಕ್ಕೆ ವಿಮಾನಯಾನ, ಬಹರೈನ್ನಿಂದ ಅದೇ ದಿನ ರಾತ್ರಿ 8 ಗಂಟೆಗೆ ಮಂಗಳೂರಿಗೆ ಆಗಮಿಸಲಿದೆ.
ಮಂಗಳೂರು-ಬೆಂಗಳೂರು ಮಧ್ಯೆ ಪ್ರತಿ ಸೋಮವಾರ, ಬುಧವಾರ, ಶುಕ್ರವಾರ, ಶನಿವಾರ ಸಂಜೆ 4.15ಕ್ಕೆ, ಬೆಂಗಳೂರಿನಿಂದ ಮಂಗಳೂರಿಗೆ ಸಂಜೆ 7ಕ್ಕೆ ಆಗಮಿಸಲಿದೆ.
ಮಂಗಳೂರು-ಮುಂಬಯಿ ಮಧ್ಯೆ ಪ್ರತಿ ಸೋಮವಾರ, ಬುಧವಾರ, ಶುಕ್ರವಾರ, ಶನಿವಾರ ರಾತ್ರಿ 9ಕ್ಕೆ, ಮಂಗಳೂರಿಗೆ ಇದೇ ವಾರ ಸಂಜೆ 3.30ಕ್ಕೆ ಆಗಮನ. ಮಂಗಳೂರು-ಕೊಚ್ಚಿನ್ ಮಧ್ಯೆ ಪ್ರತಿ ಮಂಗಳವಾರ, ಗುರುವಾರ, ಭಾನುವಾರ ಬೆಳಗ್ಗೆ 8.25, ಕೊಚ್ಚಿನ್ನಿಂದ ಮಂಗಳೂರಿಗೆ ಪ್ರತಿ ಸೋಮವಾರ, ಬುಧವಾರ, ಶನಿವಾರ ಸಂಜೆ 5.25ಕ್ಕೆ. ಏರ್ ಇಂಡಿಯಾ ನಿತ್ಯ ವಿಮಾನ ಮಂಗಳೂರು-ಮುಂಬಯಿ ಮಧ್ಯಾಹ್ನ 12.50, ಮುಂಬಯಿನಿಂದ ಮಂಗಳೂರಿಗೆ ಅದೇ ಸಮಯ. ಮಂಗಳೂರು-ಬೆಂಗಳೂರು ಯಾನ ಪ್ರತಿ ಮಂಗಳವಾರ, ಗುರುವಾರ, ಭಾನುವಾರ ಸಂ. 5.50.