ಇಲಿ ಪಾಷಾಣ ಸೇವಿಸಿದ್ದ ವ್ಯಕ್ತಿ ಸಾವು
ಹೆಬ್ರಿ: ಇಲ್ಲಿನ ಮುದ್ರಾಡಿ ಗ್ರಾಮದ ಬಲ್ಲಾಡಿಯ ನಿವಾಸಿ ಇಲಿ ಪಾಷಾಣ ಹುಡಿಯನ್ನು ಸೇವಿಸಿ ಮೃತಪಟ್ಟ ಘಟನೆ ಶನಿವಾರ ನೆಡದಿದೆ.
ರಾಜು ಕುಲಾಲ್ (50) ಮೃತರು. ಇವರು ವಿಪರೀತ ಕುಡಿತದ ಚಟವನ್ನು ಹೊಂದಿದ್ದರು. ಶುಕ್ರವಾರ ವಿಪರೀತ ಅಮಲು ಪದಾರ್ಥ ಸೇವಿಸಿ ಮನೆಯಲ್ಲಿಯೇ ಇದ್ದ ಅವರಿಗೆ ರಾತ್ರಿ 8 ಗಂಟೆ ವೇಳೆಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ. ಈ ಸಮಯದಲ್ಲಿ ಕರೆಂಟ್ ಹೋಗಿದ್ದರಿಂದ ಕತ್ತಲಲ್ಲಿ ಹೊಟ್ಟೆ ನೋವಿಗೆ ತಂದಿಟ್ಟಿದ್ದ ಔಷಧಿ ಎಂದು ತಿಳಿದು ಇಲಿ ಪಾಷಾಣದ ಹುಡಿಯನ್ನು ಸೇವಿಸಿದ್ದಾರೆ.
ಬಳಿಕ ತೀವ್ರ ಹೊಟ್ಟೆ ಉರಿಯೆಂದು ಒದ್ದಾಡುತ್ತಿದ್ದ ಅವರನ್ನು ಉಡುಪಿ ಅಜ್ಜರಕಾಡು ಸರ್ಕಾಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಿದ್ದಾರೆ. ಈ ಬಗ್ಗೆ ಸುಧಾಕರ ಕುಲಾಲ್ ಎಂಬವರು ನೀಡಿದ ದೂರಿನಂತೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.