ಐನೆಕಿದುನಲ್ಲಿ ಜೆಡಿಎಸ್ ಸಭೆ
ಸುಬ್ರಹ್ಮಣ್ಯ: ಜಾತ್ಯತೀತ ಜನತಾದಳ ಐನೆಕಿದು ಗ್ರಾಮ ಸಮಿತಿಯ ಸಭೆ ಶುಕ್ರವಾರ ಐನೆಕಿದುವಿನಲ್ಲಿ ಪಕ್ಷದ ಹಿರಿಯ ಮುಖಂಡ ಮಲ್ಲಯ್ಯ ಗೌಡ ಕಟ್ಟೆಮನೆ ಅಧ್ಯಕ್ಷತೆಯಲ್ಲಿ ಜರುಗಿತು.
ಸುಳ್ಯ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್ನ ಸಂಭಾವ್ಯ ಅಭ್ಯರ್ಥಿ ನಂದರಾಜ್ ಸಂಕೇಶ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ ಈ ಬಾರಿ ಕುಮಾರ ಸ್ವಾಮಿ ಇಲ್ಲದೆ ಸರ್ಕಾರ ರಚನೆ ಅಸಾಧ್ಯ. ಕುಮಾರಸ್ವಾಮಿ ಮುಖ್ಯಮಂತ್ರಿ ಅದಾಗಿನ ಜನಪರ ಆಡಳಿತ ಕಾರ್ಯ ವೈಖರಿಯೇ ನಮ್ಮ ಗೆಲುವಿಗೆ ಸೋಪಾನ. ಹಾಗಾಗಿ ಸುಳ್ಯ ಕ್ಷೇತ್ರದಲ್ಲಿ ಗೆಲವು ಸಾಧಿಸುವ ಮೂಲಕ ಜೆಡಿಎಸ್ ಈ ಭಾರಿ ರಾಜ್ಯದಲ್ಲಿ ದಿಗ್ವಿಜಯ ಸಾಧಿಸಲಿದೆ ಎಂದವರು ಹೇಳಿದರು.
ತಾಲೂಕು ಜೆಡಿಎಸ್ ಉಪಾಧ್ಯಕ್ಷ ಸೋಮಸುಂದರ ಕೂಜುಗೋಡು ಪ್ರಸ್ತಾವನಾ ಭಾಷಣ ಮಾಡಿದರು. ಜೆಡಿಎಸ್ನ ಅಶೋಕ್ ಕೂಜುಗೋಡು, ಮಧುಸೂಧನ ಕಾಪಿಕಾಡು, ನಾರಾಯಣ ಆಗ್ರಹಾರ, ನೀಲಪ್ಪ ಗೌಡ ಕೆದಿಲ, ವಸಂತ ಕುಮಾರ್ ಕೂಜುಗೋಡು, ಹರ್ಷ ಮುಂಡಾಜೆ, ವಸಂತ ಕಂದರಪ್ಪಾಡಿ, ಹೂವಯ್ಯ ಕಲ್ಲೇರಿ, ಯುವ ಜೆಡಿಎಸ್ ತಾಲೂಕು ಸಂಘಟನಾ ಕಾರ್ಯದರ್ಶಿ ವಿನೂತ್ ಮಲ್ಲಾರ, ಕೃಷ್ಣಪ್ಪ ಕುದ್ಳುಳಿ ಉಪಸ್ಥಿತರಿದ್ದರು.