ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಿ.ಸಿ. ರೋಡ್: ಇಂದು ಕೆಜೆಪಿ ಸಭೆ

Rashmi Kasaragodu
Updated On : 31 Mar 2013, 1:29 am

ಬಂಟ್ವಾಳ: ಚುನಾವಣೆ ಹಿನ್ನೆಲೆಯಲ್ಲಿ ಕೆಜೆಪಿ ಕಾರ್ಯಕರ್ತರ ಸಭೆಯನ್ನು  ಮಾ.31ರಂದು ಸಂಜೆ 4ಕ್ಕೆ ಬಿ.ಸಿ. ರೋಡ್ನಲ್ಲಿರುವ ಪಕ್ಷದ ಕಚೇರಿಯಲ್ಲಿ ಆಯೋಜಿಸಲಾಗಿದೆ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರ ಕೆಜೆಪಿ ಅಧ್ಯಕ್ಷ ಇಬ್ರಾಹಿಂ ಕೈಲಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಸಭೆಯಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಮರಿಯಮ್ಮ ಥಾಮಸ್, ಜಿಲ್ಲಾಧ್ಯಕ್ಷ ಕೆ.ರವೀಂದ್ರ ಶೆಟ್ಟಿ, ರಾಜ್ಯ ಕಾರ್ಯದರ್ಶಿ ರಾಮಚಂದ್ರ ಬೈಕಂಪಾಡಿ, ಉಪಾಧ್ಯಕ್ಷರಾದ ಗೋಕುಲ್ದಾಸ್ ಭಂಡಾರ್ಕಾರ್, ಶ್ರೀನಿವಾಸ ಶೆಟ್ಟಿ ನಾರ್ಯ, ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಹಮೀದ್ ಕುದ್ರೋಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಚಂದ್ರ ಹೆಗ್ಡೆ ಮತ್ತಿತರ ನಾಯಕರು ಭಾಗವಹಿಸಲಿದ್ದಾರೆ ಎಂದರು.
ಈಗಾಗಲೇ 1200 ಕಾರ್ಯಕರ್ತರ ನೋಂದಾವಣೆ ಮಾಡಲಾಗಿದ್ದು, ಸಭೆಯಲ್ಲಿ ಇನ್ನೂ ಹಲವು ಮಂದಿ ಇತರ ಪಕ್ಷಗಳ ಕಾರ್ಯಕರ್ತರು ಕೆಜೆಪಿ ಸೇರುವುದಾಗಿ ತಿಳಿಸಿದರು. ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಯನ್ನು ಚುರುಕುಗೊಳಿಸಲಾಗಿದ್ದು, ತಾಲೂಕಿನ 15ಕ್ಕೂ ಅಧಿಕ ಗ್ರಾಮಗಳನ್ನು ಸಂಪರ್ಕಿಸಲಾಗಿದೆ, 6 ಗ್ರಾಮಗಳಲ್ಲಿ ಸಮಿತಿ ರಚನೆ ಮಾಡಲಾಗಿದೆ ಎಂದರು.
ನಾಗರಾಜ ಶೆಟ್ಟರನ್ನು ದೂರವಿಡಿ: ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಚಂದ್ರ ಹೆಗ್ಡೆ ಮಾತನಾಡಿ, ಜೆಡಿಎಸ್ ತೊರೆದಿರುವ ಬಿ.ನಾಗರಾಜ ಶೆಟ್ಟಿ ಕೆಜೆಪಿ ಸೇರಲು ಒಲವು ಹೊಂದಿದ್ದಾರೆ. ಆದರೆ ಅವರು ಕೆಜೆಪಿಗೆ ಬಂದರೆ ಪಕ್ಷದ ವರ್ಚಸ್ಸಿಗೆ ಹಾನಿಯಾಗುತ್ತದೆ. ಅವರನ್ನು ಪಕ್ಷದಿಂದ ದೂರವಿಡುವಂತೆ ಈಗಾಗಲೇ ಕಾರ್ಯಕರ್ತರು ಒತ್ತಾಯಿಸಿದ್ದು, ಈ ಬಗ್ಗೆ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಗೋಕುಲ್ದಾಸ್ ಭಂಡಾರ್ಕಾರ್, ರಾಜಪಲ್ಲಮಜಲು, ಇಲಿಯಾಸ್, ಖಾಲಿದ್ ವಗ್ಗ ಇದ್ದರು.
ರಾಜ ಪಲ್ಲಮಜಲು ಸುಳ್ಯದಿಂದ ಸ್ಪರ್ಧೆ?: ದಲಿತ ಮುಖಂಡ ರಾಜ ಪಲ್ಲಮಜಲು ಸುಳ್ಯ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆಯೇ?
ಸ್ವತಃ ರಾಜಪಲ್ಲಮಜಲು ಅವರೇ ಈ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಮೀಸಲು ಕ್ಷೇತ್ರವಾಗಿರುವ ಸುಳ್ಯದಿಂದ ಕಣಕ್ಕಿಳಿಯಲು ತಾನು ಆಕಾಂಕ್ಷಿಯಾಗಿದ್ದು, ಟಿಕೆಟ್ ದೊರಕುವ ಸಾಧ್ಯತೆಗಳು ಇವೆ ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಬಂಟ್ವಾಳ ಪುರಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಅವರು ಪರಾಜಿತರಾಗಿದ್ದರು.
ಈ ಹಿಂದೆ ಅವರು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ತೆಂಗಿನಕಾಯಿ ಚಿಹ್ನೆಯಡಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement