ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಂಗಳೂರಲ್ಲಿ ಅವತರಿಸದ 'ಕೂರ್ಮಾವತಾರ'!

Rashmi Kasaragodu
Updated On : 31 Mar 2013, 1:31 am

ಮಂಗಳೂರು: ನಗರದ ಶಾರದಾ ವಿದ್ಯಾಲಯದಲ್ಲಿ ಕರಾವಳಿ ಬೆಳ್ಳಿ ಮಂಡಲ ವತಿಯಿಂದ ಶನಿವಾರ ನಡೆಯಬೇಕಿದ್ದ ರಾಷ್ಟ್ರಪ್ರಶಸ್ತಿ ಪುರಸ್ಕೃತ 'ಕೂರ್ಮಾವತಾರ' ಚಲನಚಿತ್ರ ಪ್ರದರ್ಶನ, ಸಂವಾದ ರದ್ದುಗೊಂಡಿದೆ.  ಸಿನಿಮಾ ನಿರ್ಮಾಪಕರು ಹಾಗೂ ಮಂಗಳೂರಿನ ದೊಡ್ಡ ಸಿನಿಮಾ ಮಂದಿರಗಳ ಮಧ್ಯೆ ಚಿತ್ರ ಬಿಡುಗಡೆ ಕುರಿತ ಒಪ್ಪಂದ ಏರ್ಪಟ್ಟ ಹಿನ್ನಲೆಯಲ್ಲಿ ಚಿತ್ರ ವೀಕ್ಷಣೆ, ಸಂವಾದಕ್ಕೆ ಆಗಮಿದ ಪ್ರೇಕ್ಷಕರು ನಿರಾಶೆಗೊಳ್ಳಬೇಕಾಯಿತು. ಮೊದಲು ಚಿತ್ರವೀಕ್ಷಣೆ, ಸಂವಾದಕ್ಕೆ ಸಮ್ಮತಿ ಸೂಚಿಸಿದ್ದ ನಿರ್ಮಾಪಕರು ನಂತರ ದಿಢೀರನೆ ನಿರ್ಧಾರ ಬದಲಿಸಿ, ಫಿಲಂ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಬಗ್ಗೆ ಸತತ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ, ಈಗ ರಾಜ್ಯದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಶಾಲಾ ಕಾಲೇಜುಗಳಲ್ಲಿ ಪ್ರದರ್ಶನಕ್ಕೆ ಅಡ್ಡಿ ಇಲ್ಲ ಎಂದಿದ್ದರು ನಿರ್ಮಾಪಕರು. ಹಾಗಾಗಿ ಕೂರ್ಮಾವತಾರ ವೀಕ್ಷಣೆ, ಸಂವಾದವನ್ನು ಮುಂದಕ್ಕೆ ಹಾಕಬೇಕಾಯಿತು ಎಂದು ಚಿತ್ರದಲ್ಲಿನ ಗಾಂಧಿ ಪಾತ್ರಧಾರಿ ಡಾ. ಶಿಕಾರಿಪುರ ಕೃಷ್ಣಮೂರ್ತಿ ಅಸಹಾಯಕತೆ ವ್ಯಕ್ತಪಡಿಸಿದರು. ಈ ಹಿನ್ನಲೆಯಲ್ಲಿ ಬದಲಿಯಾಗಿ ಜಿ.ವಿ. ಅಯ್ಯರ್ರ ರಾಷ್ಟ್ರಪ್ರಶಸ್ತಿ ಪುರಸ್ಕೃತ 'ಆದಿ ಶಂಕರಾಚಾರ್ಯ' ಹಿಂದಿ ಚಿತ್ರವನ್ನು ಪ್ರದರ್ಶಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement