ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವಿಟ್ಲ, ಕನ್ಯಾನದಲ್ಲಿ ಮತದಾನ ಬಹಿಷ್ಕಾರ ಬ್ಯಾನರ್

Rashmi Kasaragodu
Updated On : 31 Mar 2013, 1:30 am

ವಿಟ್ಲ: ವಿಧಾನ ಸಭಾ ಚುನಾವಣೆಯ ದಿನ ಸಮೀಪಿಸುತ್ತಿದ್ದಂತೆ ವಿಟ್ಲ ಮತ್ತು ಕನ್ಯಾನದಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್ ರಾರಾಜಿಸುತ್ತಿದೆ.
ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಾಲಯದ ಹಿಂಭಾಗದ ಚರಂಡಿ ದುರ್ನಾತ ಬೀರುತ್ತಿದೆ. ಇದನ್ನು ಸರಿಪಡಿಸಲು ಪಂಚಾಯಿತಿ ಯಾವುದೇ ಕ್ರಮ ಕೈಗೊಳ್ಳದೆ ಮಾರಕ ರೋಗದ ಭೀತಿ ಎಬ್ಬಿಸಿದೆ. ಸರಿಪಡಿಸುವ ಭರವಸೆಯನ್ನು ನೀಡಿತ್ತಾ ಬಂದಿರುವ ಪಂಚಾಯಿತಿ ಇದನ್ನು ಸರಿಪಡಿಸಿಲ್ಲ. ಬ್ರಹ್ಮಕಲಶೋತ್ಸವದ ಸಮಯದಲ್ಲಿ ಸ್ವಲ್ಪ ಸರಿಯಾದದ್ದು, ಬಳಿಕ ಮತ್ತೆ ಅದೇ ಪರಿಸ್ಥಿತಿ ಮುಂದುವರಿದಿದೆ.
ಮಂಗಳೂರು ರಸ್ತೆಯಲ್ಲಿ ಅನಂತೇಶ್ವರ ದೇವಾಲಯದಿಂದ ಬೊಬ್ಬೆಕೇರಿಯವರೆಗೆ ಸೂಕ್ತ ಫುಟ್ಪಾತ್ ಮತ್ತು ಎರಡು ಬದಿಗಳಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಒಂದು ಬಾರಿ ಮನವಿ ಸಲ್ಲಿಸಿತ್ತು. ಬಳಿಕ ಸದ್ದಿಲ್ಲದೆ ಇದ್ದ ತಂಡ ಈಗ ಕಾಮಗಾರಿ ಮಾಡದ ಹಿನ್ನೆಲೆಯಲ್ಲಿ ಬೊಬ್ಬೆಕೇರಿ ನಿವಾಸಿಗಳು ಮತದಾನ ಬಹಿಷ್ಕಾರ ಮಾಡುದಾಗಿ ಹೇಳಿಕೊಂಡಿದ್ದಾರೆ ಎಂದು ಬ್ಯಾನರ್ ಹಾಕಿದ್ದಾರೆ.
ಕನ್ಯಾನ ಗ್ರಾಮದ ಮೇರೊಟ್ಟು ಎಂಬಲ್ಲಿ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಹಲವಾರು ಮನೆಗಳಿದ್ದು, ರಸ್ತೆ ಸಂಪರ್ಕವಿಲ್ಲದೆ ಪರದಾಡುತ್ತಿರುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ಅವರ ನೇತೃತ್ವದಲ್ಲಿ ಸಾರ್ವಜನಿಕರು ಕನ್ಯಾನ ಪಂಚಾಯಿತಿಗೆ ಕಳೆದ ನ. 5ರಂದು ಮುತ್ತಿಗೆ ಹಾಕಿ ಶಾಸಕರು ಬರುವವರೆಗೆ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತ್ತಿದ್ದರು. ಬಳಿಕ ರಸ್ತೆ ಅಭಿವೃದ್ಧಿ ಪಡಿಸುವ ಭರವಸೆ ಸಿಕ್ಕಿತ್ತಾದರೂ ಯಾವುದೂ ಕಾರ್ಯ ರೂಪಕ್ಕೆ ಬಂದಿರಲಿಲ್ಲ. ಐದು ವರ್ಷಗಳ ಹಿಂದೆ ಪಂಚಾಯಿತಿ ರು. 1 ಲಕ್ಷ ಅನುದಾನದಲ್ಲಿ ರಸ್ತೆ ನಿರ್ಮಿಸಿತ್ತಾದರೂ, ಕೆಲ ಸಮಯದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ರಸ್ತೆ ಮಧ್ಯ ಬೇಲಿ ಹಾಕಿದ್ದಾರೆ. ಮಕ್ಕಳು, ವೃದ್ಧರು ಅನಾರೋಗ್ಯಕ್ಕೊಳಗಾದಲ್ಲಿ ಕನ್ಯಾನದವರೆಗೆ ಹೊತ್ತು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಜುಲೈ 7ರಂದು ಜಿಲ್ಲಾಧಿಕಾರಿ, ಬಂಟ್ವಾಳ ಶಾಸಕರಿಗೆ, ಸ್ಥಳೀಯ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಅದಕ್ಕೆ ಕಾಸಿನ ಬೆಲೆ ನೀಡಿಲ್ಲದ ಹಿನ್ನೆಲೆಯಲ್ಲಿ ಮೇರೊಟ್ಟು ನಿವಾಸಿಗಳು ಜನಪ್ರತಿನಿಧಿಗಳ, ಗ್ರಾ.ಪಂ., ಅಧಿಕಾರಿಗಳ ವಿರುದ್ಧ ಖಂಡಿಸಿ ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement