ಶಿಕ್ಷಕ ಐತ್ತಪ್ಪ ನಾಯ್ಕ್ಗೆ ನಾಗರಿಕ ಅಭಿನಂದನೆ
ಉಪ್ಪಿನಂಗಡಿ: ಶಿಕ್ಷಣ ಕ್ಷೇತ್ರದಲ್ಲಿ 41 ವರ್ಷ ಕಾಲ ಕಾರ್ಯ ನಿರ್ವಹಿಸಿ ನಿವೃತ್ತರಾದ ಉಪ್ಪಿನಂಗಡಿ ಸರ್ಕಾರಿ ಮಾದರಿ ಉ.ಹಿ.ಪ್ರಾ. ಶಾಲೆ ಮುಖ್ಯೋಪಾಧ್ಯಾಯ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಿ. ಐತ್ತಪ್ಪ ನಾಯ್ಕ್ ಅವರಿಗೆ ಶನಿವಾರ ಉಪ್ಪಿನಂಗಡಿಯಲ್ಲಿ ಭಾವಪೂರ್ಣ ನಾಗರಿಕ ಅಭಿನಂದನೆ ಸಲ್ಲಿಸಲಾಯಿತು.
ವಿಶ್ರಾಂತ ಪ್ರಾಂಶುಪಾಲ ಪ್ರೊ.ಆರ್. ವೇದವ್ಯಾಸ ಅವರು ಐತ್ತಪ್ಪ ನಾಯ್ಕ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ಅಭಿನಂದನಾ ಸಮಿತಿ ಗೌರವಾಧ್ಯಕ್ಷ, ದಾನಿ ಯು.ವಿ. ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ, ಸಾಹಿತಿ ಶಿವರಾಮ ಶಿಶಿಲ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯತೀಶ್ ಶೆಟ್ಟಿ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ರೈ, ಧನ್ಯಕುಮಾರ್ ರೈ ಮಾತನಾಡಿದರು.
ವಿದ್ಯಾರ್ಥಿಗಳ ಪರ ವೃಂದಾ, ಮೇಘನಾ, ಶಿಕ್ಷಕರ ಪರ ಮೋಲಿ ವಿಲ್ಮಾ ಪಿಂಟೋ, ಶಾಲಾಭಿವೃದ್ಧಿ ಸಮಿತಿ ಪರ ಪುಷ್ಪಲತಾ ಕೆ., ಸಂಘ ಸಂಸ್ಥೆಗಳ ಪರ ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಶಿಕ್ಷಣ ಸಂಸ್ಥೆಗಳ ಪರ ಉಪ್ಪಿನಂಗಡಿ ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ದಿವಾಕರ ಆಚಾರ್ಯ, ಹಿರಿಯ ವಿದ್ಯಾರ್ಥಿಗಳ ಪೋಷಕರ ಪರ 34 ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷ ಆಸ್ಕರ್ ಆಲಿ, ನಿವೃತ್ತ ಶಿಕ್ಷಕರ ಪರ ಆನಂದ ರೈ ಅಭಿನಂದನಾ ಮಾತುಗಳನ್ನಾಡಿದರು.
ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವಠಾರದಿಂದ ಐತಪ್ಪ ನಾಯ್ಕ್ ಅವರನ್ನು ಮೆರವಣಿಗೆಯಲ್ಲಿ ಶಾಲಾ ವಠಾರಕ್ಕೆ ಕರೆ ತರಲಾಯಿತು. ಜಗದೀಶ್ ಶೆಟ್ಟಿ ಹಾಗೂ ಶಿಕ್ಷಕಿ ವಂದನಾ ಅಭಿನಂದನಾ ಪತ್ರ ವಾಚಿಸಿದರು.
ಅಭಿನಂದನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಐ. ಸ್ವಾಗತಿಸಿದರು. ಕಾರ್ಯದರ್ಶಿ ಯು.ಎಲ್. ಉದಯ ಕುಮಾರ್ ವಂದಿಸಿದರು. ಶಿಕ್ಷಕಿ ಪುಷ್ಪಾ ತಿಲಕ್ ನಿರೂಪಿಸಿದರು.