ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

7ರಿಂದ ಬೇಸಿಗೆ ಉಚಿತ ತರಬೇತಿ ಶಿಬಿರ

Vishwanath S
Updated On : 1 Apr 2013, 11:39 am

ಮೂಲ್ಕಿ: ಮೂಲ್ಕಿ ಸಮೀಪದ ಶಿಮಂತೂರಿನ ಶ್ರೀ ಆದಿ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಆಶ್ರಯದಲ್ಲಿ ಆದಿ ಜನಾರ್ದನ ದೇವಸ್ಥಾನದಲ್ಲಿ ಏ. 7ರಿಂದ ಮೇ 20ರವರೆಗೆ ಬೇಸಿಗೆ ಉಚಿತ ತರಬೇತಿ ಶಿಬಿರವು ಜರಗಲಿದೆ.
ಶಿಬಿರದಲ್ಲಿ ಚಿತ್ರಕಲೆ, ಭಾಷಣ ಕಲೆ, ಯಕ್ಷಗಾನ ತರಬೇತಿ, ಭಾಷಾ ಬೆಳವಣೆಗೆ, ಯೋಗ, ಧ್ಯಾನ, ಕಾರ್ಯಕ್ರಮ ನಿರ್ವಹಣೆ ಮತ್ತಿತರ ವಿಷಯಗಳ ಕುರಿತು ತರಬೇತಿ ನೀಡಲಿದ್ದು, ಶಿಬಿರದ ಉದ್ಘಾಟನೆಯು ಏ. 7ರಂದು ಸಂಜೆ ದೇವಳದ ಸಭಾಂಗಣದಲ್ಲಿ ಜರಗಲಿದೆ. ಮೂಲ್ಕಿಯ ಎಂ.ಆರ್. ಪೂಂಜ ಚಾರಿಟೇಬಲ್ ಟ್ರಸ್ಟ್,ನ ಪದ್ಮಾವತಿ ಹರಿ ಪೂಂಜ ಶಿಬಿರವನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ, ಪುನರೂರು ವಹಿಸಲಿದ್ದಾರೆ.
ದೇವಳದ ವ್ಯವಸ್ಥಾಪನಾ ಸಮಿತಿಯ ವೇದಮೂರ್ತಿ ರಾಮಚಂದ್ರ ಭಟ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್,ನ ಜಿಲ್ಲಾ ಸಹಾಯಕ ಆಯುಕ್ತ ಎಂ. ಸರ್ವೋತ್ತಮ ಅಂಚನ್, ಭಜನಾ ಸಂಕೀರ್ತನಕಾರ ನರಸಿಂಹ ಭಾಗವತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement