ಇಂದು ಭಾಗವತ ಸಪ್ತಾಹ
ಮಂಗಳೂರು: ಚಿನ್ಮಯಿ ಮಿಷನ್ ವತಿಯಿಂದ ಕುದ್ರೋಳಿಯ ಶ್ರೀ ಉಮಾಧಾಮದಲ್ಲಿ ಏ. 1ರಿಂದ 7ರವರೆಗೆ ಭಾಗವತ ಸಪ್ತಾಹ ನಡೆಯಲಿದೆ. ಸಪ್ತಾಹವನ್ನು ಗೋವಾದ ಪ್ರಹ್ಲಾದ ಚೈತನ್ಯ ನಡೆಸಿಕೊಡುವರು. ಪ್ರತಿದಿನ ಮಧ್ಯಾಹ್ನ 3.15 ರಿಂದ ಸಂಜೆ 6.15ರವರೆಗೆ ಸಪ್ತಾಹ ನಡೆಯಲಿದೆ. ಆಸಕ್ತರು ಮಿಷನ್ ಕಾರ್ಯದರ್ಶಿ ನಿವೇದಿತಾ- 9900253655 ಸಂಪರ್ಕಿಸಿ.
ಇಂದು, ನಾಳೆ ವೈದಿಕ ಕಾರ್ಯ
ಪುತ್ತೂರು; ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ,ೋದ್ಧಾರ ಬ್ರಹ್ಮಕಲಶೋತ್ಸವದ ಬಗ್ಗೆ ಸ್ಥಳ ಪ್ರಶ್ನೆಯಲ್ಲಿ ಕಂಡು ಬಂದಂತೆ ದೈವಜ್ಞರ ನಿರ್ದೇಶನದಂತೆ ಏ.1 ಮತ್ತು 2ರಂದು ವಿವಿಧ ವೈದಿಕ ಕಾರ್ಯಕ್ರಮಗಳು ಜರುಗಲಿವೆ. ಸೋಮವಾರ ಬೆಳಗ್ಗೆ ಗಣಪತಿ ಹೋಮ, ತ್ರಿಕಾಲ ಪೂಜೆ, ಮೃತ್ಯುಂಜಯ ಹೋಮ, ಗಾಯತ್ರಿ ಹೋಮ, ರಾತ್ರಿ ಸುದರ್ಶನ ಹೋಮ, ಪ್ರೇತಾವಾಹನೆ, ಬಾಧೋಚ್ಛಾಟನೆ, ಉಚ್ಚಾಟನಾ ಬಲಿ ನಡೆಯಲಿದೆ. ಮಂಗಳವಾರ ಗಣಪತಿ ಹೋಮ, ತಿಲಾಹೋಮ, ಪವಮಾನ ಹೋಮ, ಚಕ್ರಾಬ್ಜ ಪೂಜೆ, ದ್ವಾದಶ ಮೂರ್ತಿ ಆರಾಧನೆ, ಕೂಷ್ಮಾಂಡೇಯ ಹೋಮ ನಡೆಯಲಿದೆ.
ಮಂಗಳೂರು: ಇಂದಿನಿಂದ ಕಾಲ್ಚೆಂಡು ತರಬೇತಿ
ಮಂಗಳೂರು: ಸೋಮೇಶ್ವರ ಯುಆರ್ ಅಕಾಡೆಮಿ ಆಫ್ ಸಾಕ್ಕರ್ ಸಂಸ್ಥೆ ವತಿಯಿಂದ ಸೋಮವಾರದಿಂದ ಸಂತ ಅಲೋಶಿಯಸ್ ಕಾಲೇಜಿನ ಸೆಂಟನರಿ ಮೈದಾನದಲ್ಲಿ ಬೆಳಗ್ಗೆ 7 ರಿಂದ 9ರವರೆಗೆ ವಾರ್ಷಿಕ ಬೇಸಗೆ 'ಫುಟ್ಬಾಲ್ ತರಬೇತಿ ಶಿಬಿರ' ನಡೆಯಲಿದೆ. 5 ವಾರ ನಡೆಯುವ ತರಬೇತಿಗೆ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಮಾಣಿಕ್ಯ ಸ್ಪೋರ್ಟ್ಸ್,ನಲ್ಲಿ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ ಉಮೇಶ್ ಉಚ್ಚಿಲ-9845164300 ಸಂಪರ್ಕಿಸಬಹುದು.
ಇಂದಿನಿಂದ ಬಾಸ್ಕೆಟ್,ಬಾಲ್ ಶಿಬಿರ
ಮಂಗಳೂರು: ಜಿಲ್ಲಾ ಬಾಸ್ಕೆಟ್,ಬಾಲ್ ಅಸೋಸಿಯೇಶನ್ ವತಿಯಿಂದ ಏ. 1ರಿಂದ 30ರವರೆಗೆ ನಗರದ ಯು. ಶ್ರೀನಿವಾಸ ಮಲ್ಯ ಒಳ ಕ್ರೀಡಾಂಗಣದಲ್ಲಿ ಬೇಸಿಗೆ ತರಬೇತಿ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಬಾಲಕ-ಬಾಲಕಿಯರು ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಆದಿತ್ಯ 9964837261 ಸಂಪರ್ಕಿಸಬಹುದು.
ಇಂದಿನಿಂದ ರಾಮಮಂದಿರ ಸುವರ,ಮಹೋತ್ಸವ
ಮಂಗಳೂರು: ಬೋಳಾರದ ಲೀವೆಲ್ ಶ್ರೀರಾಮ ಮಂದಿರದ ಬಿಂಬ ಪ್ರತಿಷ್ಠಾ ಸುವರ, ಮಹೋತ್ಸವ ಪ್ರಯುಕ್ತ ಏ. 1ರಿಂದ 11ರವರೆಗೆ 'ಶ್ರೀ ರಾಮ ತಾರಕ ಮಂತ್ರ ಯಜ್ಞ' ನಡೆಯಲಿದೆ. 11 ರಂದು ಶ್ರೀ ರಾಮ ತಾರಕ ಮಂತ್ರ ಯಜ್ಞವು ದೇರೆಬೈಲು ಹರಿಕೃಷ, ತಂತ್ರಿ ನೇತೃತ್ವದಲ್ಲಿ ನಡೆಯಲಿದೆ. ಏ. 1ರಿಂದ 10ರವರೆಗೆ ಸಂಜೆ 6 ರಿಂದ 7ರ ತನಕ ನಡೆಯುವ ಶ್ರೀರಾಮ ಜಪ, ಭಜನೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವರು ಎಂದು ಸೇವಾ ಸಮಿತಿ ಕಾರ್ಯದರ್ಶಿ ಬಿ. ಜ್ಞಾನೇಶ್ವರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಏ. 12 ರಿಂದ 20ರವರೆಗೆ ರಾಮ ನವಮಿ ಮಹೋತ್ಸವ ನಡೆಯಲಿದೆ. 19ರಂದು ಜನ್ಮೋತ್ಸವ ಪೂಜೆ, ಸಂಜೆ 5ಕ್ಕೆ ಶ್ರೀ ರಾಮ ಲಕ್ಷ ಜಪ ಯಜ್ಞ, ರಾತ್ರಿ 10ಕ್ಕೆ ತೊಟ್ಟಿಲು ಸೇವೆ ನಡೆಯಲಿದೆ ಎಂದರು.
ಇಂದಿನಿಂದ ಹೆಚ್ಚುವರಿ ಸೀಸನ್ ಟಿಕೆಟ್ ಜಾರಿಗೆ
ಮಂಗಳೂರು: ನೈಋತ್ಯ ರೇಲ್ವೆ ಮಾಸಿಕ ಹಾಗೂ ತ್ರೈಮಾಸಿಕ ಸೀಸನ್ ಟಿಕೆಟ್ ಅಲ್ಲದೆ ಹೆಚ್ಚುವರಿಯಾಗಿ ಅರ್ಧ ವಾರ್ಷಿಕ ಮತ್ತು ವಾರ್ಷಿಕ ಸೀಸನ್ ಟಿಕೆಟ್ ವ್ಯವಸ್ಥೆಯನ್ನು ಏ.1ರಿಂದ ಜಾರಿಗೆ ತರಲಿದೆ. ವಿದ್ಯಾರ್ಥಿಗಳಿಗೆ ರಿಯಾಯ್ತಿಯಲ್ಲಿ ಸೀಸನ್ ಟಿಕೆಟ್,ನ್ನು ಮಾಸಿಕ ಮತ್ತು ತ್ರೈಮಾಸಿಕ ಅವಧಿಗೆ ನೀಡುತ್ತಿದೆ. ಮಾಸಿಕ ಟಿಕೆಟ್,ವುಳ್ಳವರು ಅರ್ಧ ವಾರ್ಷಿಕ ಟಿಕೆಟ್,ಗೆ 5 ಪಟ್ಟು ಮಾಸಿಕದಿಂದ ವಾರ್ಷಿಕಕ್ಕೆ 10 ಪಟ್ಟು ಸೀಸನ್ ಟಿಕೆಟ್,ಗೆ ಹೆಚ್ಚುವರಿ ಮೊತ್ತ ತೆರಬೇಕಾಗುತ್ತದೆ. ಟಿಕೆಟ್ ಮೊತ್ತವನ್ನು ಮರು ಪಾವತಿಸಲಾಗುವುದಿಲ್ಲ. ಈಗ ಇರುವ ಇಝತ್ ಮಾಸಿಕ ಮತ್ತು ಉಚಿತ ಮಾಸಿಕ ಸೀಸನ್ ಟಿಕೆಟ್,ಗಳಿಗೆ ಇದು ಅನ್ವಯವಾಗುವುದಿಲ್ಲ ಎಂದು ರೇಲ್ವೆ ಫಾಲ್ಘಾಟ್ ವಿಭಾಗದ ಪ್ರಕಟಣೆ ತಿಳಿಸಿದೆ.
ಇಂದಿನಿಂದ ತಪಾಸಣೆ ಶಿಬಿರ
ಮಂಗಳೂರು: ಅತ್ತಾವರ ಕೆಎಂಸಿ ಆಸ್ಪತ್ರೆಯ ಇಎನ್,ಟಿ ವಿಭಾಗದಿಂದ ಏ. 1 ಮತ್ತು 2ರಂದು ಉಚಿತ ಮೂಗು ತಪಸಣಾ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಮೂಗಿಗೆ ಸಂಬಂಧಿಸಿದ ಬಾಧೆ ಮತ್ತು ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಶಿಬಿರವು ಬೆಳಗ್ಗೆ 9.30 ರಿಂದ ಸಂಜೆ 4ರ ತನಕ ನಡೆಯಲಿದೆ. ರೇಡಿಯೋಲಾಜಿ ಪರೀಕ್ಷೆಯಲ್ಲಿ ಶೇ. 20 ಹಾಗೂ ಲ್ಯಾಬ್ ಪರೀಕ್ಷೆಗೆ ಶೇ.10 ರಿಯಾಯಿತಿ ನೀಡಲಾಗುವುದು ಎಂದು ವೈದ್ಯಕೀಯ ಮೇಲ್ವಿಚಾರಕ ಡಾ. ಮಧುಸೂದನ್ ಉಪಾಧ್ಯಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದಿನಿಂದ ವೈದ್ಯಕೀಯ ಶಿಬಿರ
ಮಂಗಳೂರು: ಅಶೋಕ ನಗರ ಹೈಗೆ ಬಜಾರಿನ ಕರ್ನಾಟಕ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ವತಿಯಿಂದ ಏ.1 ರಿಂದ 15ರವರೆಗೆ ಉಚಿತ ಮೆಡಿಕಲ್ ಶಿಬಿರ 'ಪಂಚಕರ್ಮ ಸೇವೆ' ನಡೆಯಲಿದೆ. ಆಯುರ್ವೇದದ ಮೂಲಕ ಹಣ,ು ಹಂಪಲುಗಳಿಂದ ಆರೋಗ್ಯದ ಮೇಲಾಗುವ ಪರಿಣಾಮ ಮಾಹಿತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ 0824-2451442 ಸಂಪರ್ಕಿಸಬಹುದು ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದಿನಿಂದ ನೇಚರ್-ವೆಂಚರ್
ಮಂಗಳೂರು: ಕಾರ್,ಸ್ಟ್ರೀಟ್,ನ ಸಹರಾ ಪ್ರಕೃತಿ ರಕ್ಷಣಾ ಸೆಂಟರ್ ವತಿಯಿಂದ 1ರಿಂದ 10ನೇ ತರಗತಿಯ ಮಕ್ಕಳಿಗಾಗಿ ಏ. 1ರಿಂದ 15ರವರೆಗೆ ಕೇಂದ್ರದ ಪ್ರಕೃತಿ ಭವನದಲ್ಲಿ ನೇಚರ್-ವೆಂಚರ್ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಮಕ್ಕಳ ದೈಹಿಕ ಬೆಳವಣಿಗೆಯ ಜತೆಗೆ, ಬೌದ್ಧಿಕ, ಸಾಮಾಜಿಕ, ಆಧ್ಯಾತ್ಮಿಕತೆಯ ಮೌಲ್ಯಗಳನ್ನು ತಿಳಿಸಿಕೊಡಲಾಗುವುದು. ಪ್ರಕೃತಿ ಒಡನಾಟದ ಪ್ರಾಮುಖ್ಯತೆ ಹಾಗೂ ಪೊಟ್ಟಣ ತಿಂಡಿಗಳು, ಕರಿದ ಪದಾರ್ಥಕ್ಕೆ ಬದಲಾಗಿ ಸರಳ ಜೀವನ, ಪಾಕೃತಿಕ ಆಹಾರ ಪದ್ಧತಿ ಅರಿವು ಮೂಡಿಸಲಾಗುವುದು. ಸಂಪನ್ಮೂಲ ವ್ಯಕ್ತಿಗಳಾಗಿ ರಾಮ್,ದಾಸ್, ಪ್ರೇಮ್,ನಾಥ್ ಮರ,ೆ, ಹರೀಶ್ ಮರ,ೆ, ಪ್ರವೀಣ್ ಬಜಾಲ್, ಮುರಹರಿ ಕಾಸರಗೋಡು, ಯತೀಶ್ ಪಾಲ್ಗೊಳ್ಳುವರು. ಹೆಚ್ಚಿನ ಮಾಹಿತಿಗಾಗಿ ಕೇಂದ್ರದ ಮಾಲಕಿ ಪೂರ,ಿಮಾ ರಾವ್- (944983485) ಸಂಪರ್ಕಿಸಬಹುದು.
ನಾಳೆಯಿಂದ ಸಂಗೀತ ಕಾರ್ಯಾಗಾರ
ಪುತ್ತೂರು: ನೆಹರೂ ನಗರದ ಗಾನಸರಸ್ವತಿ ಸಂಗೀತ ಕಲಾಶಾಲೆಯಲ್ಲಿ 3 ದಿನಗಳ ಸಂಗೀತ ಕಾರ್ಯಾಗಾರ ಏ.2ರಿಂದ 4ರ ವರೆಗೆ ಕಾಡು ಎಂಬಲ್ಲಿ ನಡೆಯಲಿದೆ. ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಶಿಬಿರ ನಡೆಯಲಿದ್ದು, ಬೆಂಗಳೂರಿನ ವಿದುಷಿ ಎಂ.ಎಸ್.ವಿದ್ಯಾ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸುವರು. ಹರಿದಾಸರ ಕೀರ್ತನೆಗಳು, ವಾಗ್ಗೇಯಕಾರರ ಅಪರೂಪದ ರಚನೆಗಳನ್ನು ಶಿಬಿರದಲ್ಲಿ ಹೇಳಿಕೊಡಲಾಗುವುದು ಎಂದು ಸಂಯೋಜಕಿ ವೀಣಾ ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.