ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕ್ಷೇತ್ರ ಯುವ ಜನತಾದಳ ಅಧ್ಯಕ್ಷ ರಾಜಿನಾಮೆ

Vishwanath S
Updated On : 1 Apr 2013, 11:37 am

ಸುಳ್ಯ: ಜಿಲ್ಲೆಯಲ್ಲಿ ಜೆಡಿಎಸ್ ಅಸಮಾಧಾನ ಸ್ಫೋಟಗೊಂಡು ರಾಜಿನಾಮೆ ಪರ್ವ ಆರಂಭಗೊಂಡ ಬೆನ್ನಿಗೆ ಸುಳ್ಯದಲ್ಲೂ ಇದರ ಪರಿಣಾಮ ಕಾಣಿಸಿಕೊಂಡಿದೆ.
ಪಕ್ಷದ ಸುಳ್ಯ ವಿಧಾನಸಭಾ ಕ್ಷೇತ್ರಾಧ್ಯಕ್ಷರ ಮೇಲಿನ ಅಸಮಾಧಾನದಿಂದ ತಾಲೂಕು ಯುವ ಜನತಾದಳ ಅಧ್ಯಕ್ಷ ಸ್ಥಾನಕ್ಕೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಜಗದೀಶ್ ಪಡ್ಪು ರಾಜಿನಾಮೆ ನೀಡಿದ್ದಾರೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಜಗದೀಶ್, ಕ್ಷೇತ್ರ ಸಮಿತಿ ಅಧ್ಯಕ್ಷರು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದಿಂದ ಬರುವ ಚುನಾವಣಾ ವೆಚ್ಚದ ಹಣದ ಮೇಲೆ ಕಣ,ಿಟ್ಟು ಹಳೆಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು ದುಃಖದ ವಿಚಾರ ಎಂದು ಆರೋಪಿಸಿದರು.
ಚುನಾವಣಾ ವೆಚ್ಚಕ್ಕೆ ಬಂದ ಹಣ ದುರುಪಯೋಗಪಡಿಸಲಾಗಿದೆ.  ಸದ್ಯದ ಪರಿಸ್ಥಿತಿಯಲ್ಲಿ ಸ್ಥಳೀಯ, ತಾಲೂಕು ಹಾಗೂ ಜಿಲ್ಲಾ ಮಟ್ಟದ ನಾಯಕರು ಸ್ವಾರ್ಥ ರಾಜಕಾರಣದಲ್ಲಿ ಮುಳುಗಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಜೆಡಿಎಸ್ ಗೊಂದಲದ ಗೂಡಾಗಿದೆ. ಇದರಿಂದ ಬೇಸತ್ತು ಪಕ್ಷ ತ್ಯಜಿಸುತ್ತಿದ್ದೇನೆ ಎಂದು ಜಗದೀಶ್ ಪಡ್ಪು ತಿಳಿಸಿದರು.
ವೆಂಕಟ್ರಮಣ ಡಿ.ಎಸ್. ಸಂತೋಷ್ ರೈ ಪಂಜ, ಚರಣ್,ರಾಜ್, ಆಕಾಶ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement