3ರೊಳಗೆ ಮನೆಗೆ ಚೀಟಿ ವಿತರಣೆ ಪೂರ್ಣ
ಮಂಗಳೂರು: ಮತ ಚಲಾಯಿಸಲು ಅನುಕೂಲವಾಗುವಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ಏ.30ರಿಂದಲೇ ಮನೆ ಮನೆಗೆ ಸಿಬ್ಬಂದಿ ಮತದಾನ ಚೀಟಿ ವಿತರಿಸಲು ಪ್ರಾರಂಭಿಸಿದ್ದಾರೆ. ಬಿಎಲ್‌ಒ ಮುಖೇನ ಈ ಕಾರ್ಯ ನಡೆಯುತ್ತಿದ್ದು, ಮೇ 3ರೊಳಗೆ ಎಲ್ಲ ಮನೆಗಳಿಗೆ ಸ್ಲಿಪ್ ವಿತರಿಸಲಿದ್ದಾರೆ. ಸ್ಲಿಪ್ ಸಿಗದಿದ್ದವರು ಸಂಬಂಧಿತ ಬಿಎಲ್‌ಒಗಳನ್ನು ಸಂಪರ್ಕಿಸಬಹುದು ಎಂದು ಚುನಾವಣಾಧಿಕಾರಿ ಹರ್ಷಗುಪ್ತ ತಿಳಿಸಿದ್ದಾರೆ.
ಇಂದು ಬೈಕ್
ಬೃಹತ್ ರ್ಯಾಲಿ
ಕಾರ್ಕಳ: ಬಿಜೆಪಿ ಯುವಮೋರ್ಚಾ ವತಿಯಿಂದ 2ರಂದು ಮಧ್ಯಾಹ್ನ 2.30ಕ್ಕೆ ಕಾರ್ಕಳ ಬೈಪಾಸ್‌ನಿಂದ ಬೃಹತ್ ಬೈಕ್ ರ್ಯಾಲಿ ಆರಂಭವಾಗಲಿದ್ದು ಬೈಲೂರಿನಲ್ಲಿ ಸಮಾರೋಪಗೊಳ್ಳಲಿದೆ ಎಂದು ಯುವಮೋರ್ಚಾ ಅಧ್ಯಕ್ಷ ಮಹಾವೀರ ಹೆಗ್ಡೆ ತಿಳಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ರ್ಯಾಲಿ ಉದ್ಘಾಟಿಸಲಿದ್ದಾರೆ.
ನಟಿ ಭಾವನಾ
ಇಂದು ಮತಯಾಚನೆ
ಮಂಗಳೂರು: ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕಿ, ನಟಿ ಭಾವನಾ ಅಭ್ಯರ್ಥಿ ಪರ 2ರಂದು ಜಿಲ್ಲೆಯಲ್ಲಿ ಬಿರುಸಿನ ಪ್ರಚಾರ ನಡೆಸಲಿದ್ದಾರೆ. ಬೆಳಗ್ಗೆ 10ಕ್ಕೆ ಬಜ್ಪೆ, 11ಕ್ಕೆ ಮಂಗಳೂರು, 11.30 ಬಂಟ್ವಾಳ, 1 ಗಂಟೆಗೆ ಪುತ್ತೂರು, ಸಂಜೆ 4ಕ್ಕೆ ಸುಳ್ಯದಲ್ಲಿ ಸಭೆಯಲ್ಲಿ ಪಾಲ್ಗೊಳ್ಳುವರು. ನಂತರ ಮಂಗಳೂರಿನ ಸುತ್ತಮುತ್ತ ಮತಯಾಚನೆ ಮಾಡುವರು ಎಂದು ಕಾಂಗ್ರೆಸ್ ಮುಖಂಡ ಟಿ.ಎಂ.ಶಾಹೀದ್ ತಿಳಿಸಿದ್ದಾರೆ.
ಚುನಾವಣಾ ಮಾಹಿತಿಗೆ ವೆಬ್‌ಸೈಟ್ ವೀಕ್ಷಿಸಿ
ಮಂಗಳೂರು: ಜಿಲ್ಲೆಯಲ್ಲಿ ನ್ಯಾಯ ಸಮ್ಮತ ಹಾಗೂ ಮುಕ್ತ ಚುನಾವಣೆಗೆ ಕೈಗೊಂಡ ಕ್ರಮಗಳನ್ನು ಎಲ್ಲರೂ ವೀಕ್ಷಿಸಲು ಅನುಕೂಲವಾಗುವಂತೆ ಜಿಲ್ಲಾ ಚುನಾವಣಾಧಿಕಾರಿಕಚೇರಿಯಲ್ಲಿ ಢಿಢಿಢಿ.ಜ್ಞ.ಟ್ಝ್ಛಿ.್ಝಟಿ ವೆಬ್‌ಸೈಟ್ ರೂಪಿಸಲಾಗಿದೆ. ಜಿಲ್ಲಾಡಳಿತದಿಂದ ಸಭೆ ಸಮಾರಂಭಗಳಿಗೆ ನೀಡಿದ ಅನುಮತಿ, ವಾಹನಗಳಿಗೆ ನೀಡಿದ ಅನುಮತಿ, ಮಾಧ್ಯಮಗಳಿಗೆ ನೀಡಿದ ಅನುಮತಿ, ಅಭ್ಯರ್ಥಿಗಳು ನೀಡಿರುವ ಖರ್ಚು ಮಾಹಿತಿಯನ್ನು ಇಲ್ಲಿಂದ ಪಡೆಯಬಹುದು. ಜಿಲ್ಲಾ ಚುನಾವಣಾಧಿಕಾರಿಗಳು ರೂಪಿಸಿದ ಈ ವೆಬ್‌ಸೈಟ್‌ನಲ್ಲಿ ಸಮಗ್ರ ಮಾಹಿತಿಗಳಿವೆ. ಸಭೆ ಸಮಾರಂಭಗಳಿಗೆ, ರ್ಯಾಲಿಗಳಿಗೆ ಒಟ್ಟು 402 ಅರ್ಜಿ ಬಂದಿದ್ದು ಅನುಮತಿಸಲಾಗಿದೆ. ಪತ್ರಿಕೆ, ದೃಶ್ಯ ಮಾಧ್ಯಮಗಳಿಗೆ ಸಂಬಂಧಿಸಿ 210 ಅರ್ಜಿಗಳಿಗೆ ಅನುಮತಿ ನೀಡಲಾಗಿದೆ. ಪಾವತಿ ಸುದ್ದಿ ಮಾಹಿತಿ ಲಭ್ಯವಿದ್ದು, ಅಕೌಂಟೆಂಟ್ ರಿಜಿಸ್ಟರ್ ಆಫ್ ಕ್ಯಾಂಡಿಡೇಟ್ಸ್‌ನಡಿ ಅಭ್ಯರ್ಥಿಗಳು ನೀಡಿದ ವಿವರ ಪಡೆಯಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.