ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಎರಡು ರಾಜಕೀಯ ಪಕ್ಷ ಸಾಕು

Lingaraj Badiger
Updated On : 2 May 2013, 12:05 pm

ಪ್ರಜಾಪ್ರಭುತ್ವ ನಾಡಿನಲ್ಲಿ ಮತದಾನದ ಹಕ್ಕನ್ನು ಚಲಾಯಿಸುವುದು ಕಡ್ಡಾಯ. ತಮ್ಮ ಪ್ರದೇಶಕ್ಕೆ ಉತ್ತಮ ಕೆಲಸ ನಿರ್ವಹಿಸಿದ ಅಭ್ಯರ್ಥಿಯನ್ನು ಆಯ್ಕೆ ಮಾಡಬಹುದಲ್ಲಾ. ಮತ ಹಾಕದಿದ್ದರೆ ಬೇಡದವರು ಸ್ಥಾನ ಪಡೆದುಕೊಳ್ಳುವ ಅವಕಾಶ ಜಾಸ್ತಿ. ಇದಕ್ಕೆ ಎಡೆಮಾಡಿಕೊಡದೆ ಎಲ್ಲರೂ ಮತ ಹಾಕಲೇಬೇಕು. ಕೇಂದ್ರದಲ್ಲಿ ಪ್ರಬಲ ಎರಡು ಪಕ್ಷಗಳು ಚುನಾವಣೆಗೆ ಸ್ಪರ್ಧಿಸುವ ಅವಕಾಶ ನೀಡಿದರೆ ರಾಜಕೀಯದ ಗೊಂದಲಗಳು ಕಡಿಮೆಯಾಗಬಹುದು. ಅನೇಕ ಪಕ್ಷಗಳ ಸ್ಪರ್ಧೆಯಿಂದ ದೇಶದ ಆಡಳಿತ ವ್ಯವಸ್ಥೆಯೇ ಕೆಟ್ಟುಹೋಗಿದೆ.
-ಖ್ಯಾತ ವೈದ್ಯೆ, ಮಂಗಳೂರು.

ಪ್ರಜಾಪ್ರಭುತ್ವವನ್ನು ಪಾರುಮಾಡಿ
ಪ್ರಜಾಪ್ರಭುತ್ವ ಎಂದರೆ ಜನರಿಂದ ಜನರಿಗಾಗಿ ಜನರದ್ದೇ ಆಡಳಿತ ವ್ಯವಸ್ಥೆ ಎಂಬುದು ನಮಗೆ ಗೊತ್ತಿರುವ ವ್ಯಾಖ್ಯೆ. ಆದರೆ ಪ್ರಸ್ತುತ ಕರ್ನಾಟಕದ ಚುನಾವಣೆಯ ಚಿತ್ರಣವನ್ನು ನೋಡಿದರೆ ಇದು ಜನರಿಂದ ರಾಜಕರಣಿಗಳಿಗಾಗಿ ಎಂಬ ಹೊಸ ಬೆಳವಣಿಗೆ ಕಾಣುತ್ತಿದೆ. ನಮ್ಮ ರಾಜಕಾರಣಿಗಳು ಆಡಳಿತ ವ್ಯವಸ್ಥೆಯೆಲ್ಲಾ ತಮ್ಮದ್ದೇ ಹಾಗೂ ತಮ್ಮವರದ್ದೇ ಎಂದು ತಿಳಿದಂತಿದೆ. ಇಲ್ಲಿ ತಾತ್ವಿಕ ಚಿಂತನೆಯ ನಾಯಕತ್ವಕ್ಕಿಂತ ಹಣ ಮತ್ತು ಸ್ನಾಯು ಬಲದ ರಾಜಕಾರಣವೇ ಗಟ್ಟಿಗೊಳ್ಳುತ್ತದೆ. ಹಾಗಾಗಿ ಜನರನ್ನು ಮರುಳು ಮಾಡುವ ಭರವಸೆಗಳೇ ಮತ್ತೆ ಮತ್ತೆ ಕೇಳಿ ಬರುತ್ತಿವೆ. ಉದಾಹರಣೆಗೆ ಒಂದು ರುಪಾಯಿಗೆ ಒಂದು ಕೆ.ಜಿ. ಅಕ್ಕಿ ಕೊಡುವುದು, ಒಂದೊಂದು ವಾರ್ಡ್‌ಗೂ ಒಂದೊಂದು ಇಂಗ್ಲಿಷ್ ಮಾಧ್ಯಮ ಶಾಲೆ ಮಾಡುತ್ತೇವೆನ್ನುವುದು, ಆಯ್ಕೆಯಾದ ವಾರದೊಳಗೆ ಸಾಲ ಮನ್ನಾ ಇಂತಹ ಭರವಸೆಗಳಿಗೆ ತಲೆಬುಡವಿದೆಯೇ ಇದನ್ನೆಲ್ಲಾ ಜನ ನಂಬುವಷ್ಟು ಮೂಢರಿದ್ದಾರೆಂದುಕೊಂಡರೂ ಹೀಗೂ ಮೋಸ ಮಾಡಬಾರದು. ಹಾಗಾಗಿ ಸ್ಥಳೀಯವಾಗಿ ವಿದ್ಯಾವಂತರು ಹಾಗೂ ಪ್ರಾದೇಶಿಕವಾಗಿ ಮಾಧ್ಯಮದವರು ಇಂತಹ ಜನ ಮರುಳೋ ಚುನಾವಣೆ ಮರುಳೋ ಎಂಬ ಪರಿಸ್ಥಿತಿಯಿಂದ ಪ್ರಜಾಪ್ರಭುತ್ವವನ್ನು ಪಾರುಮಾಡಬೇಕಾಗಿದೆ.
-  ಡಾ. ಚಂದ್ರಶೇಖರ ದಾಮ್ಲೆ, ಸುಳ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement