ಕಚೇರಿಯಲ್ಲಿ ಚುನಾವಣಾ ಕೈಪಿಡಿಯೇ ಇಲ್ಲ!
ಬೆಳ್ತಂಗಡಿ: ಚುನಾವಣಾಧಿಕಾರಿಯವರ ಕಚೇರಿಯಲ್ಲಿ ಚುನಾವಣಾ ಕೈಪಿಡಿಯೇ ಇಲ್ಲವಂತೆ ಈ ಚೋದ್ಯ ಬೆಳ್ತಂಗಡಿ ಚುನಾವಣಾಧಿಕಾರಿಯವರ ಕಚೇರಿಯಲ್ಲಿ ನಡೆದಿದೆ. ಇದು ಗೊತ್ತಾದ್ದು ಹೀಗೆ....
ಬಿಜೆಪಿಯ ಬೆಳ್ತಂಗಡಿ ತಾಲೂಕು ಪ್ರಧಾನ ಕಾರ್ಯದರ್ಶಿ ಜಿ. ನಾರಾಯಣ ಆಚಾರ್ ಅವರು ಏ. 27 ರಂದು ಚುನಾವಣಾ ಕೈಪಿಡಿಯನ್ನು ಒದಗಿಸುವಂತೆ ಅರ್ಜಿ ಮೂಲಕ ಕೋರಿಕೊಂಡಿದ್ದರು. ಆದರೆ, ಕೈಪಿಡಿಯು ಸರಬರಾಜು ಆಗದೆ ಇರುವುದರಿಂದ ಅದನ್ನು ನೀಡಲು ಸಾಧ್ಯವಿಲ್ಲ ನಿಮಗೆ ಬೇಕಾದ ಮಾಹಿತಿಯನ್ನು ್ಛಜ್ಟ್ಞಛ್ಠಟಿಛಡಿಛ್ಞಛ.ಟ್ಝ್ಛಿ.್ಝಟಿ ನಿಂದ ಡೌನಲೋಡ್ ಮಾಡಿಕೊಳ್ಳಲು ತಿಳಿಸಿದ್ದಾರೆ.
ಕೈಪಿಡಿಯ ಸರಬರಾಜಾದನಂತರ ಒದಗಿಸಲಾಗುವುದು ಎಂದು ಹಿಂಬರಹದಲ್ಲಿ ತಿಳಿಸಿದ್ದಾರೆ. ಚುನಾವಣೆಗೆ ಬೆರಳೆಣಿಕೆಯ ದಿನಗಳಷ್ಟೇ ಇದ್ದರೂ ಕಚೇರಿಯಲ್ಲಿ ಕೈಪಿಡಿ ಇಲ್ಲದಿರುವುದು ಚುನಾವಣಾ ಆಯೋಗದ ಹಲವಾರು ಅವ್ಯವಸ್ಥೆಗಳಲ್ಲಿ ಒಂದಾಗಿದೆ ಎಂದೆನಿಸಿದೆ.