'ಕಾಂಗ್ರೆಸ್, ಬಿಜೆಪಿ ಶೋಷಿತರ ಪ್ರತಿನಿಧಿಗಳಲ್ಲ'
ಪುತ್ತೂರು: ಕಾಂಗ್ರೆಸ್ ಮತ್ತು ಬಿಜೆಪಿಯ ಅಜೆಂಡಾ ಒಂದೇ ಆಗಿದ್ದು, ಈ ಎರಡೂ ಪಕ್ಷಗಳ ಬೂಟಾಟಿಕೆಯನ್ನು ಜನತೆ ಅರ್ಥಮಾಡಿಕೊಳ್ಳಬೇಕು. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿರುವವರು ಅಲ್ಪಸಂಖ್ಯಾತರ, ದಲಿತರ, ಶೋಷಿತರ ಪ್ರತಿನಿಧಿಗಳಲ್ಲ ಎಂಬುದು ನಮಗೆ ಗೊತ್ತಿರಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ದ್ವಾರಕನಾಥ್ ಹೇಳಿದ್ದಾರೆ. ಪುತ್ತೂರಿನಲ್ಲಿ ಮಂಗಳವಾರ ಎಸ್ಡಿಪಿಐ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.