'ಕೈ' ಲೆಕ್ಕಕ್ಕಿಲ್ಲ, ಬಿಜೆಪಿಯೇ ಸ್ಪರ್ಧಿ: ಜೆಡಿಎಸ್ ಅಭ್ಯರ್ಥಿ ಗುಲಾಂ
ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದಲ್ಲಿ ತನಗೆ ಕಾಂಗ್ರೆಸ್ ಲೆಕ್ಕಕ್ಕಿಲ್ಲ, ಏನಿದ್ದರೂ ಬಿಜೆಪಿ ವಿರುದ್ಧ ನೇರ ಸ್ಪರ್ಧೆ ಎಂದು ಜೆಡಿಎಸ್ ಅಭ್ಯರ್ಥಿ ಗುಲಾಂ ಮಹಮ್ಮದ್ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಹಣ ಬಲದಿಂದ ಸ್ಪರ್ಧೆಗಿಳಿದಿದ್ದು, ಬಿಜೆಪಿ ಅಭ್ಯರ್ಥಿ 8 ವರ್ಷ ಅವಧಿಯಲ್ಲಿ ಶಾಸಕರಾಗಿದ್ದಾಗ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ತಾನು ಹಣ ಪಡೆದು ಕಾಂಗ್ರೆಸ್ ಪರ ಮತಯಾಚಿಸುತ್ತಿದ್ದೇನೆ ಎಂಬ ಆರೋಪ ನಿರಾಕರಿಸಿದ ಅವರು, ಎಲ್ಲೆಡೆಗೆ ಜೆಡಿಎಸ್ ಪರ ಅಲೆ ಇದೆ ಎಂದರು. ತಾನು ಗೆದ್ದರೆ ಪ್ರತಿ ಗ್ರಾಮ ಹಾಗೂ ವಾರ್ಡ್ನಲ್ಲಿ ಶಾಸಕರ ಕಚೇರಿ, ಮಾಹಿತಿ ಕೇಂದ್ರ ತೆರೆಯುವುದಾಗಿ ಹೇಳಿದರು.
ಜೆಡಿಎಸ್ನಿಂದ ಅಸ್ಲಂರನ್ನು ಉಚ್ಚಾಟಿಸಲಾಗಿದೆ. ಅವರೀಗ ಮಾನಸಿಕವಾಗಿ ನೊಂದು ಏನೆಲ್ಲ ಮಾತನಾಡುತ್ತಿದ್ದಾರೆ. ಅವರ ಹೇಳಿಕೆಗೆ ಈಗ ಮಹತ್ವ ಇಲ್ಲ ಎಂದು ರಾಜ್ಯ ಉಪಾಧ್ಯಕ್ಷ ಸುಶೀಲ್ ನರ್ಹೊನಾ ಸುದ್ದಿಗಾರರ ಪ್ರಶ್ನೆಗೆ ಸ್ಪಷ್ಟಪಡಿಸಿದರು.