ಟಿಕೆಟ್ ಕೊಡದ ಕಾಂಗ್ರೆಸ್‌ಗೆ ಮರಳಲಾರೆ'
ಕಾಪು: ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಜಿಲ್ಲೆಯಲ್ಲಿ ಜೆಡಿಎಸ್‌ನ ಖಾತೆ ತೆರೆಯಲಿದ್ದೇನೆ. ಮುಂದೆ ಮತ್ತೆ ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ. ಜಿಲ್ಲೆಯಲ್ಲಿ ಜೆಡಿಎಸ್ ಅನ್ನು ಸಂಘಟಿಸುವುದೊಂದೇ ಈಗಿರುವ ಗುರಿ. ಇದು ನನ್ನ ಕೊನೆಯ ಚುನಾವಣೆ, ಮುಂದೆ ಸಮರ್ಥ ಯುವಕರನ್ನು ಸಜ್ಜುಗೊಳಿಸಿ ಅವರನ್ನು ಚುನಾವಣೆಗೆ ನಿಲ್ಲಿಸುತ್ತೇನೆ ಎಂದು ಕಾಪು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಸಂತ ವಿ. ಸಾಲ್ಯಾನ್ ಹೇಳಿದ್ದಾರೆ.
ಬುಧವಾರ ತಮ್ಮ ಮನೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕಾಪುವಿನಲ್ಲಿ 1978ರಿಂದ ಕಾಂಗ್ರೆಸ್ ಅನ್ನು ಸಂಘಟಿಸಿ ಇಷ್ಟು ವರ್ಷ ಬೆಳೆಸಿದ್ದೇನೆ. ಪ್ರಾಮಾಣಿಕ ಕಾರ್ಯಕರ್ತನಾಗಿ ರಾತ್ರಿ ಹಗಲು ಶ್ರಮಿಸಿದ್ದೇನೆ. ನನ್ನಿಂದಾಗಿ ಕಾಂಗ್ರೆಸ್‌ನಲ್ಲಿ ಸಾಕಷ್ಟು ಮಂದಿ ನಾಯಕರು, ಜನಪ್ರತಿನಿಧಿಗಳು ಹುಟ್ಟಿದ್ದಾರೆ. ಆದರೆ ಅದೇ ಪಕ್ಷ ಈಗ ಟಿಕೆಟು ನಿರಾಕರಿಸಿ ವಂಚಿಸಿದೆ ಎಂದರು.