ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪಿಲಿಕುಳಕ್ಕೆ ಬಂದ ಅಪರೂಪ ಅತಿಥಿಗಳು...

Lingaraj Badiger
Updated On : 2 May 2013, 12:01 pm

ಮಂಗಳೂರು: ಪಿಲಿಕುಳ ಡಾ.ಶಿವರಾಮ ಕಾರಂತ ಜೈವಿಕ ಉದ್ಯಾನಕ್ಕೆ 13 ಮಂದಿ ವಿಶೇಷ ಅತಿಥಿಗಳ ಆಗಮನವಾಗಿದೆ.  ಅಪರೂಪದ ಮೊಸಳೆಗಳ ಆಗಮನವಾಗಿದ್ದು, ಇದರಲ್ಲಿ ಅವನತಿ ಅಂಚಿನಲ್ಲಿರುವ 3 ಮೊಸಳೆ ಸೇರಿದೆ. 4 ಪಟ್ಟೆ ಹೆಬ್ಬಾವನ್ನು ಚೆನ್ನೈ ಸ್ನೇಕ್ ಪಾರ್ಕ್ ಮತ್ತು ಚೆನ್ನೈನ ಮದ್ರಾಸ್ ಮೊಸಳೆ ಬ್ಯಾಂಕ್ ಟ್ರಸ್ಟ್‌ನಿಂದ ತರಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಈ ಉದ್ಯಾನದಿಂದ 7 ಹಾವು, 4 ಭಾರತೀಯ ಹೆಬ್ಬಾವು, 2 ಹೆಣ್ಣು ಸರ್ಪವನ್ನು ಚೆನ್ನೈ ಮೃಗಾಲಯಕ್ಕೆ ಕಳುಹಿಸಲಾಗಿದೆ. ಪ್ರಸ್ತುತ ಪಿಲಿಕುಳದಲ್ಲಿ ಮೊಸಳೆಗಳ ಪೈಕಿ ಅವಳಿ ಮೊಸಳೆ ಸೇರಿದಂತೆ ವಿವಿಧ ಜಾತಿಯ ಮೊಸಳೆಗಳಿವೆ ಎಂದು ನಿರ್ದೇಶಕ ಎಚ್.ಜೆ.ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement