ಪಿಲಿಕುಳಕ್ಕೆ ಬಂದ ಅಪರೂಪದ ಅತಿಥಿಗಳು...
ಮಂಗಳೂರು: ಪಿಲಿಕುಳ ಡಾ.ಶಿವರಾಮ ಕಾರಂತ ಜೈವಿಕ ಉದ್ಯಾನಕ್ಕೆ ವಿಶೇಷ ಅತಿಥಿಗಳ ಆಗಮನವಾಗಿದೆ. ಅವನತಿ ಅಂಚಿನಲ್ಲಿರುವ 3 ಮೊಸಳೆ, 4 ಪಟ್ಟೆ ಹೆಬ್ಬಾವನ್ನು ಚೆನ್ನೈ ಸ್ನೇಕ್ ಪಾರ್ಕ್ ಮತ್ತು ಚೆನ್ನೈನ ಮದ್ರಾಸ್ ಮೊಸಳೆ ಬ್ಯಾಂಕ್ ಟ್ರಸ್ಟ್ನಿಂದ ತರಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಈ ಉದ್ಯಾನದಿಂದ 7 ಹಾವು, 4 ಭಾರತೀಯ ಹೆಬ್ಬಾವು, 2 ಹೆಣ್ಣು ಸರ್ಪವನ್ನು ಅಲ್ಲಿನ ಮೃಗಾಲಯಕ್ಕೆ ಕಳುಹಿಸಲಾಗಿದೆ. ಪ್ರಸ್ತುತ ಪಿಲಿಕುಳದಲ್ಲಿ ಮೊಸಳೆಗಳ ಪೈಕಿ ಅವಳಿ ಮೊಸಳೆ ಸೇರಿದಂತೆ ವಿವಿಧ ಜಾತಿಯ ಮೊಸಳೆಗಳಿವೆ ಎಂದು ನಿರ್ದೇಶಕ ಎಚ್.ಜೆ.ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.