ಪೆರ್ನೆ ದುರಂತ: ಮಧ್ಯಂತರ ಪರಿಹಾರ
ಕ.ಪ್ರ.ವಾರ್ತೆ ಟಿ ಮಂಗಳೂರು ಟಿ ಮೇ 1
ಪೆರ್ನೆಯಲ್ಲಿ ಏ.9ರಂದು ಸಂಭವಿಸಿದ ಗ್ಯಾಸ್ ಟ್ಯಾಂಕರ್ ಅವಘಡಕ್ಕೆ ಸಂಬಂಧಿಸಿದಂತೆ ಎಚ್ಪಿಸಿಎಲ್ ಸಂತ್ರಸ್ತರಿಗೆ ಮಧ್ಯಂತರ ಪರಿಹಾರವಾಗಿ ಒಟ್ಟು ರು. 17 ಲಕ್ಷ ಬಿಡುಗಡೆ ಮಾಡಿದೆ.
ಈ ಘಟನೆಯಲ್ಲಿ 11 ಮಂದಿ ಸಾವಿಗೀಡಾಗಿದ್ದು, 12 ಮನೆಯ ಸೊತ್ತು ಹಾನಿಗೀಡಾಗಿತ್ತು. ಈ ಬಗ್ಗೆ ಲೋಕೋಪಯೋಗಿ ಇಲಾಖೆ ನಷ್ಟ ಲೆಕ್ಕಾಚಾರ ಮಾಡಿದ್ದು, 43,19,764.78 ನಷ್ಟ ಅಂದಾಜಿಸಿ ಜಿಲ್ಲಾಡಳಿತಕ್ಕೆ ವರದಿ ನೀಡಿತ್ತು. 7 ವಾಹನಗಳು ಹಾನಿಗೀಡಾಗಿದ್ದು, 8.10 ಲಕ್ಷ ನಷ್ಟ ಅಂದಾಜಿಸಲಾಗಿತ್ತು. ಈ ಕುರಿತು ಜಿಲ್ಲಾಡಳಿತ ಏ.10 ಮತ್ತು 22ರಂದು ಸಭೆ ನಡೆಸಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಹಾಗೂ ಅನಿಲ ಸಾಗಾಟ ವೇಳೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಎಚ್ಪಿಸಿಎಲ್ ಮತ್ತು ಎಂಆರ್ಪಿಎಲ್ ಕಂಪನಿಗಳಿಗೆ ಸೂಚಿಸಿತ್ತು. ಇದೀಗ ಎಚ್ಪಿಸಿಎಲ್ ಮೃತರ ಕುಟುಂಬಕ್ಕೆ ತಲಾ 1.50 ಲಕ್ಷ, ಗಾಯಾಳುಗಳಿಗೆ ತಲಾ 50 ಸಾವಿರ ಸೇರಿ ಒಟ್ಟು 17 ಲಕ್ಷ ಮಂಜೂರು ಮಾಡಿದೆ. ಮೃತ ಕುಟುಂಬಕ್ಕೆ ಈಗಾಗಲೇ ತಲಾ ರು. 1 ಲಕ್ಷದಂತೆ ಒಟ್ಟು 10 ಲಕ್ಷ ನೀಡಿದೆ.