ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮದುವೆ ಮನೆಯಲ್ಲಿ ಸರ ಕದಿಯುತ್ತಿದ್ದ ಮಹಿಳೆ ಸೆರೆ

Rashmi Kasaragodu
Updated On : 2 May 2013, 12:51 pm

ಬಂಟ್ವಾಳ: ಮದುವೆ ಸಮಾರಂಭವನ್ನೇ ಗುರಿಯಾಗಿರಿಸಿಕೊಂಡು ಮಕ್ಕಳ ಕತ್ತಿನಿಂದ ಸರ ಅಪಹರಿಸುತ್ತಿದ್ದ ಮಹಿಳೆಯನ್ನು ಬಂಟ್ವಾಳ ನಗರ ಪೊಲೀಸರು ಬುಧವಾರ ಬಿ.ಸಿ. ರೋಡಿನಲ್ಲಿ ಬಂಧಿಸಿದ್ದಾರೆ. ನೀರುಮಾರ್ಗ ನಿವಾಸಿ ಶಶಿಕಲಾ ಬಂಧಿತ ಮಹಿಳೆ. ಈಕೆ ನೀಡಿದ ಮಾಹಿತಿಯಂತೆ ಮಂಗಳೂರಿನ ವಿವಿಧ ಜ್ಯುವೆಲ್ಲರಿ ಅಂಗಡಿಗಳಿಗೆ ಕದ್ದು ಮಾರಿದ್ದ 1.40 ಲಕ್ಷ ಮೌಲ್ಯದ 51 ಗ್ರಾಂ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಘಟನೆ ಹಿನ್ನೆಲೆ: ಕಳೆದೆರಡು ವರ್ಷಗಳಿಂದ ಸರ ಅಪಹರಣ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಈಕೆ ಸಭೆ ಸಮಾರಂಭಗಳಿಗೆ ತೆರಳಿ ಅಲ್ಲಿ ಮಕ್ಕಳನ್ನು ಪುಸಲಾಯಿಸಿ ಅವರ ಕತ್ತಿನಿಂದ ಸರ ಎಗರಿಸಿ ಪರಾರಿಯಾಗುತ್ತಿದ್ದಳು.
ಈಕೆಯ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ 4 ಪ್ರಕರಣಗಳು ದಾಖಲಾಗಿದ್ದರೂ ಈವರೆಗೂ ಪೊಲೀಸರ ಕಣ್ತಪ್ಪಿಸಿ ಕೊಂಡಿದ್ದಳು. ಬಿ.ಸಿ. ರೋಡಿನ ಖಾಸಗಿ ಹೊಟೇಲೊಂದರಲ್ಲಿ ಈಕೆ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಬಂಟ್ವಾಳ ನಗರ ಎಸ್‌ಐ ಶೇಖರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕದಿಯುತ್ತಿದ್ದುದು ಹೀಗೆ: ಝಗಮಗಿಸುವ ಸೀರೆ ಉಟ್ಟುಕೊಂಡು ಯಾರದೋ ಮದುವೆ ಸಮಾರಂಭಗಳಿಗೆ ಹಾಜರಾಗುವ ಶಶಿಕಲಾ ಮನೆಮಂದಿಯಂತೆ ವರ್ತಿಸುತ್ತಿದ್ದಳು. ಬಿ.ಸಿ. ರೋಡಿನ ಮದುವೆ ಹಾಲೊಂದರಲ್ಲಿ ಶಶಿಕಲಾಳ ಕೈಚಳಕವನ್ನು ವಿಡಿಯೋದಲ್ಲಿ ಗುರುತಿಸಿದ ಪೊಲೀಸರು, ಬುಧವಾರ ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement