ಸಾವಯವ ಆಹಾರ ಉತ್ಪನ್ನಗಳ ಪ್ರದರ್ಶನ
ಮಂಗಳೂರು: ವೇದಂ ಆರ್ಯುವೇದ ಆಸ್ಪತ್ರೆ, ದೇಸಿ ಉತ್ಥಾನ ಅಸೋಸಿಯೇಟ್ಸ್ ಬೆಂಗಳೂರು ವತಿಯಿಂದ ಮೇ 2 ರಿಂದ 8ರವರೆಗೆ ನಗರದ ಸಾಹಿತ್ಯ ಕೇಂದ್ರದಲ್ಲಿ 'ಸಾವಯವ ಆಹಾರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ' ನಡೆಯಲಿದೆ.
ಶುದ್ಧ ಆಹಾರವನ್ನು ಔಷಧಿಯಾಗಿ ತೆಗೆದುಕೊಳ್ಳಬೇಕಾದ ನಿಟ್ಟಿನಲ್ಲಿ ನೈಸರ್ಗಿಕ ಹಾಗೂ ಸಾವಯವ ಆಹಾರ ಉತ್ಪನ್ನಗಳನ್ನು ಪರಿಚಯಿಸುವ ದೃಷ್ಟಿಯಿಂದ ಸಾವಯವ ಸಪ್ತಾಹ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಮೇ 8 ರಂದು ಬೆಳಗ್ಗೆ 10.30ಕ್ಕೆ ಮಂಗಳಾದೇವಿ ಶ್ರೀ ರಾಮಕೃಷ್ಣ ಮಠದ ಶ್ರೀ ಜಿತಕಾಮಾನಂದಜಿ ಸ್ವಾಮೀಜಿ ಉದ್ಘಾಟಿಸುವರು. ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಬಿ. ಪುರಾಣಿಕ್, ಕಾರ್ಪೊರೇಶನ್ ಬ್ಯಾಂಕಿನ ಕಾರ್ಯಪಾಲಕ ನಿರ್ದೇಶಕ ಎ.ಎಲ್. ದೌಲತಾನಿ ಪಾಲ್ಗೊಳ್ಳುವರು.