ಕಾಂಗ್ರೆಸ್ ಕಾರ್ಯಕರ್ತರ ಮೆರವಣಿಗೆ, ಮತ ಯಾಚನೆ
ಮಂಗಳೂರು: ದಕ್ಷಿಣ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋ ಪರ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ನೆಹರು ಮೈದಾನದಿಂದ ಉರ್ವ ಮಾರ್ಕೆಟ್ ವರೆಗೆ ಮೆರವಣಿಗೆ ನಡೆಸಿದರು.
ಮನೆ, ಮನೆ ಪ್ರಚಾರ ಅಭಿಯಾನ ಮಧ್ಯಾಹ್ನ 12 ಗಂಟೆಗೆ ಮುಗಿಸಿದ ಜೆ.ಆರ್.ಲೋಬೋ ಮತ್ತು ಕಾರ್ಯಕರ್ತರು 2 ಗಂಟೆಗೆ ಕೆರಳ ಚೆಂಡೆ ಅಬ್ಬರಗಳ ನಡುವೆ ಕಾಂಗ್ರೆಸ್ ಬಾವುಟಗಳನ್ನು ಹಿಡಿದು ನಗರದಲ್ಲಿ ಮೆರವಣಿಗೆ ನಡೆಸಿದರು. ಕಳ್ಳಿಗೆ ತಾರನಾಥ ಶೆಟ್ಟಿ, ಐವನ್ ಡಿಸೋಜ, ಬದ್ರುದ್ದೀನ್, ಅಶ್ರಫ್, ಕಾರ್ಪೊರೇಟರ್ ನವೀನ್ ಡಿಸೋಜ, ಪ್ರವೀಣ್ ಚಂದ್ರ ಆಳ್ವ, ವಿನಯರಾಜ್ ಮೆರವಣಿಗೆ ಮುಂಚೂಣಿಯಲ್ಲಿದ್ದರು.