ಗ್ರಾಮೀಣ ಜನತೆಯ ತಲುಪದ ಬ್ಯಾಂಕ್: ಪ್ರೊ. ರೇಣುಕಾರ್ಯ
ಮಂಗಳೂರು: ಸಾಮಾಜಿಕ ಅಸಮಾನತೆಯಿಂದ ಬ್ಯಾಂಕಿಂಗ್ ಕ್ಷೇತ್ರ ಹಿಂದುಳಿದಿದ್ದು, ಹಣಕಾಸು ವಿತ್ತೀಯ ಸೇರ್ಪಡೆ ನಿರೀಕ್ಷಿತ ಗುರಿ ಸಾಧಿಸಿಲ್ಲ ಎಂದು ಮೈಸೂರು ಮಹಾಜನ ಸ್ನಾತಕೋತ್ತರ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಸಿ.ಕೆ. ರೇಣುಕಾರ್ಯ ಹೇಳಿದ್ದಾರೆ. ಶುಕ್ರವಾರ ಮಂಗಳೂರು ವಿಶ್ವವಿದ್ಯಾಲಯದ ಹಳೆ ಸೆನೆಟ್ ಸಭಾಂಗಣದಲ್ಲಿ ನಡೆದ ಎ.ಬಿ. ಶೆಟ್ಟಿ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ 'ಭಾರತದಲ್ಲಿ ಬ್ಯಾಂಕ್ಗಳು ಮತ್ತು ವಿತ್ತೀಯ ಸೇರ್ಪಡೆ' ಎಂಬ ವಿಷಯದ ಕುರಿತು ಮಾತನಾಡಿದರು.
ಸಾಮಾಜಿಕ ಸಮಸ್ಯೆಯಾದ ಬಡತನ, ನಿರುದ್ಯೋಗ ಹಣಕಾಸು ಕ್ಷೇತ್ರದಲ್ಲಿ ಪರಿಣಾಮ ಉಂಟುಮಾಡಿದೆ. ಸ್ವಾತಂತ್ರ್ಯ ನಂತರ ಸಾರ್ವಜನಿಕ ರಂಗದ ಬ್ಯಾಂಕಿಂಗ್ಗಳು ಸ್ವಲ್ಪ ಮಟ್ಟಿನ ಅಭಿವೃದ್ಧಿ ಸಾಧಿಸಿದೆ. ಆದರೆ ಗ್ರಾಮೀಣ ಜನರನ್ನು ಬ್ಯಾಂಕಿಂಗ್ ವ್ಯವಸ್ಥೆ ಇನ್ನೂ ತಲುಪಿಲ್ಲ ಎಂದರು.
ಬ್ಯಾಂಕ್ ರಾಷ್ಟ್ರೀಕರಣವಾದ ನಂತರ ವಾಣಿಜ್ಯ ನಗರಿ, ನಗರ ಪ್ರದೇಶಗಳಲ್ಲಿ ಬ್ಯಾಂಕ್ಗಳ ಸಂಖ್ಯೆ ಗಣನೀಯ ಹೆಚ್ಚಾದವು. ಪರಿಣಾಮ ಗ್ರಾಮೀಣ ಪ್ರದೇಶದಲ್ಲಿ ತನ್ನ ವ್ಯವಹಾರ ಚಟುವಟಿಕೆ ಕಮ್ಮಿಗೊಳಿಸಿತು. ಅಲ್ಲದೆ ಕೃಷಿ ಕ್ಷೇತ್ರ ನಿರ್ಲಕ್ಷ ತೋರಲಾಯಿತು. ಇಂದಿಗೂ ಕೂಡ ವ್ಯವಹಾರದ ಒಟ್ಟು ಪ್ರಮಾಣದಲ್ಲಿ ಕೃಷಿ ಕ್ಷೇತ್ರಕ್ಕೆ ಶೇ. 2.3 ಭಾಗ ಮಾತ್ರ ಮೀಸಲಿಟ್ಟಿದೆ ಎಂದು ಹೇಳಿದರು. ಹಣಕಾಸು ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು 2020ಕ್ಕೆ ಸಾಧ್ಯವಿಲ್ಲ. ಸರ್ಕಾರ ಬ್ಯಾಂಕಿಂಗ್ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದಲ್ಲಿ ಸ್ವಲ್ಪ ಮಟ್ಟಿನ ಅಭಿವೃದ್ಧಿ ಕಾಣಬಹುದು ಎಂದರು. ವಾಣಿಜ್ಯ ವಿಭಾಗದ ಡೀನ್ ಪ್ರೊ. ಮುಸ್ತೇರಿ, ಕಾರ್ಯಕ್ರಮ ಸಂಯೋಜಕ ಪ್ರೊ.ಬಿ.ಎ. ರೇಗೋ ಇದ್ದರು.
ತನುಜಾ ಕುಮಾರಿಗೆ
5ನೇ ರ್ಯಾಂಕ್
ಬಂಟ್ವಾಳ: ಮೈಸೂರು ಕರ್ನಾಟಕ ಮುಕ್ತ ವಿ.ವಿ. ನಡೆಸಿದ 2011- 12ನೇ ಸಾಲಿನ ಎಂಎ ಆಂಗ್ಲ ಭಾಷೆ ಪರೀಕ್ಷೆಯಲ್ಲಿ ವಿಟ್ಲ ನೀರಕಟ್ಟೆ ನಿವಾಸಿ ತನುಜಾ ಕುಮಾರಿ 5ನೇ ರ್ಯಾಂಕ್ ಪಡೆದಿದ್ದಾರೆ. ಅವರು ಬಿ.ಸಿ.ರೋಡ್ನ ವಕೀಲ ಕೆ. ಶೀನಪ್ಪ ಪೂಜಾರಿ ಪತ್ನಿ. ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕಿ.