ಚಿತ್ರಕಲಾ ಪ್ರದರ್ಶನ ಉದ್ಘಾಟನೆ
ಮಂಗಳೂರು: ಮನಸ್ಸು ಸಮಕಾಲೀನ ದೃಶ್ಯ ಕಲಾ ಪ್ರಪಂಚದಡೆಗೆ ಸಾಗುತ್ತಿರುವ ಪರಿ, ಖಾಲಿ ಪುಟದ ಮೇಲೆ ಗೀಚುತ್ತಾ ಸಾಗಿದಂತೆ ಮೂಡಿಬರುವ ವ್ಯಕ್ತಿ ಮುಖ, ಚದುರಂಗದ ಚೌಕಟ್ಟಿನಲ್ಲಿ ಮಣೆಯಲ್ಲಿ ಮೂಡಿರುವ ಮಾನವ ವಿವಿಧ ಭಂಗಿ, ಮನುಷ್ಯನ ಮುಖದಲ್ಲಿ ಕಣ್ಣಗಳ ಪ್ರಾಮುಖ್ಯತೆ ತಿಳಿಸುವ ಚಿತ್ರ ಇವು ಬಲ್ಮಠದ ಆರ್ಕಿಡ್ ಗ್ಯಾಲರಿಯಲ್ಲಿ ಕಂಡು ಬಂದದ್ದು ದೃಶ್ಯ. ಮಂಗಳೂರಿನ ಅನಿಲ್ ದೇವಾಡಿಗ, ಹರೀಶ್ ಕೊಡಿಯಾಲ್ಬೈಲ್, ಜೀವನ್ ಸಾಲಿಯಾನ್, ರಾಜೇಂದ್ರ ಕೇದಿಗೆ, ಉಡುಪಿಯ ಸಂತೋಷ್ ಪೈ ಯುವ ಕಲಾವಿದರ ಚಿತ್ತದಲ್ಲಿ ಆಧುನಿಕ ತಂತ್ರಜ್ಞಾನದಲ್ಲಿ ಮೂಡಿ ಬಂದ ಕಲಾಕೃತಿಗಳಿವು. ಶುಕ್ರವಾರ ಬೆಂಗಳೂರಿನ ಚಿತ್ರಕಲಾವಿದ ಸುರೇಶ್ ಜಯರಾಮ್ ಕಲಾಕೃತಿಗಳ ಪ್ರದರ್ಶನ ಉದ್ಘಾಟಿಸಿದರು. ಸಾರ್ವಜನಿಕ ವೀಕ್ಷಣೆಗೆ ಮೇ 11ರವರೆಗೆ ಕಲಾಕೃತಿ ಪ್ರದರ್ಶನ ನಡೆಯಲಿದೆ. ಎನ್ಐಟಿಕೆ ಎಲೆಕ್ಟ್ರಿಕಲ್ ವಿಭಾಗ ಪ್ರೊ. ಉದಯ ಕುಮಾರ್ ಇದ್ದರು.