ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಚುನಾವಣೆ ನಿಮಿತ್ತ ಸಾರಿಗೆ ಶಿಬಿರ ರದ್ದು

Lingaraj Badiger
Updated On : 4 May 2013, 11:42 am

ಮಂಗಳೂರು: ಚುನಾವಣೆ ಕರ್ತವ್ಯ ನಿರ್ವಹಿಸಲು ಸಾರಿಗೆ ಕಚೇರಿಯ ಸಿಬ್ಬಂದಿಗಳನ್ನು ಜಿಲ್ಲಾಧಿಕಾರಿ ನೇಮಿಸಿರುವುದರಿಂದ ಮೇ 4 ಮತ್ತು 5ರಂದು ಸಾರಿಗೆ ಕಚೇರಿಯಲ್ಲಿ ನಡೆಯಲಿರುವ ಕಲಿಕಾ ಲೈಸೆನ್ಸ್ ಮತ್ತು ಚಾಲನಾ ಪಥದಲ್ಲಿ ಚಾಲನಾ ಪರೀಕ್ಷೆ ಹಾಗೂ ಮೂಡುಬಿದಿರೆಯಲ್ಲಿ ಮೇ 8ರಂದು ನಡೆಯುವ ಶಿಬಿರವನ್ನು ರದ್ದುಗೊಳಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.
ಚುನಾವಣೆ ಪೂರ್ವ ಸಮೀಕ್ಷೆ ನಿಷೇಧ
ಮಂಗಳೂರು: ಕೇಂದ್ರ ಚುನಾವಣೆ ಆಯೋಗದ ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಚುನಾವಣೆ ಪೂರ್ವ ಸಮೀಕ್ಷೆಗಳನ್ನು ಮುದ್ರಣ, ದೃಶ್ಯ ಮಾಧ್ಯಮಗಳ ಪ್ರಸಾರವನ್ನು ಮೇ 5 ರಂದು ಬೆಳಗ್ಗೆ 7 ರಿಂದ ಸಂಜೆ 5.30ರವರೆಗೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷಗುಪ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಡಗೈ ಉಂಗುರ
ಬೆರಳಿಗೆ ಶಾಯಿ ಗುರುತು
ಮಂಗಳೂರು: ಮಾರ್ಚ್ನಲ್ಲಿ ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆ ಸಂದರ್ಭ ಮತದಾರರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಗುರುತು ಹಾಕಲಾಗಿದ್ದು, 5ರಂದು ವಿಧಾನಸಭೆ ಚುನಾವಣೆ ಸಂದರ್ಭ ಮತದಾರರ ಎಡಗೈ ಉಂಗುರ ಬೆರಳಿಗೆ ಅಳಿಸಲಾಗದ ಶಾಯಿ ಗುರುತನ್ನು ಹಾಕುವಂತೆ ಕೇಂದ್ರ ಚುನಾವಣೆ ಆಯೋಗ ಆದೇಶಿಸಿದೆ.
ಮತದಾರರ
ಸೌಲಭ್ಯ ಕೇಂದ್ರ
ಮಂಗಳೂರು: ಮತದಾರರ ಪಟ್ಟಿಯಲ್ಲಿ ತಮ್ಮ ವಿವರಗಳನ್ನು ತಿಳಿದುಕೊಳ್ಳಲು ಸಹಾಯಕ ಆಯುಕ್ತರ ಕಚೇರಿಯಲ್ಲಿ ಮತದಾರರ ಸೌಲಭ್ಯ ಕೇಂದ್ರ ತೆರೆಯಲಾಗಿದೆ. ಮತದಾರರು 0824-2220569ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ನೋಡಲ್ ಅಧಿಕಾರಿಯಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗ್ರೇಸಿ ಗೊನ್ಸಾಲಿಸ್ (9448812159) ಆಯ್ಕೆಯಾಗಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಅಂಚೆ ಮತ
ಚಲಾವಣೆಗೆ ಅವಕಾಶ
ಮಂಗಳೂರು: ಚುನಾವಣೆ ಕಾರ್ಯದಲ್ಲಿ ಸೇವಾ ನಿರತರಾಗಿರುವ ಅಧಿಕಾರಿ, ಸಿಬ್ಬಂದಿಗಳು ಅಂಚೆ ಮತ ಚಲಾಯಿಸುವ ಕುರಿತು ಚುನಾವಣೆ ಕ್ಷೇತ್ರಗಳಲ್ಲಿ ಮಸ್ಟರಿಂಗ್ ಕೇಂದ್ರದಲ್ಲಿ ಡ್ರಾಪ್ ಬಾಕ್ಸ್ ಇಡಲಾಗಿದೆ. ಮತ ಚಲಾಯಿಸಿದ ಪತ್ರವನ್ನು ಹಾಕಲು ಅವಕಾಶ ಕಲ್ಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಹರ್ಷಗುಪ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement