ಪುತ್ತೂರಲ್ಲಿ ಬಿಜೆಪಿ ಪಾದಯಾತ್ರೆ
ಪುತ್ತೂರು: ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು ಪರ ಪ್ರಚಾರಕ್ಕಾಗಿ ಗುರುವಾರ ಸಂಜೆ ಪುತ್ತೂರು ನಗರದಲ್ಲಿ ದರ್ಬೆಯಿಂದ ಬೊಳುವಾರು ತನಕ ಪಾದಯಾತ್ರೆ ನಡೆಸಲಾಯಿತು.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಸಂಸದ ನಳಿನ್ ಕುಮಾರ್, ಶಾಸಕಿ ಮಲ್ಲಿಕಾ ಪ್ರಸಾದ್, ಕ್ಷೇತ್ರ ಬಿಜೆಪಿ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ, ಅಭ್ಯರ್ಥಿ ಸಂಜೀವ ಮಂಠದೂರು, ಮೊಗೆರೋಡಿ ಬಾಲಕೃಷ್ಣ ರೈ, ಪ್ರಧಾನ ಕಾರ್ಯದರ್ಶಿಗಳಾದ ರಾಜೀವ್ ಭಂಡಾರಿ, ಜಯರಾಮ ಪೂಜಾರಿ, ಚನಿಲ ತಿಮ್ಮಪ್ಪ ಶೆಟ್ಟಿ, ಅಪ್ಪಯ್ಯ ಮಣಿಯಾಣಿ, ರಂಗನಾಥ ರೈ ಕೆ.ಎಸ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ಶಶಿಪ್ರಭಾ ಸಂಪ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಾವಿತ್ರಿ ಶಿವರಾಮ್, ಕೇಶವ ಗೌಡ ಪುಯಿಲ, ಶ್ರೀರಾಮ ಸೇನೆ ಮಾಜಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಪುರಸಭಾ ಸದಸ್ಯರಾದ ರಾಜೇಶ್ ಬನ್ನೂರು, ಜೀವಂದರ್ ಜೈನ್, ವಿನಯ ಭಂಡಾರಿ, ಯಶೋಧ ಬಿರಾವ್, ವನಿತಾ ಬೊಳ್ವಾರ್, ಹರೀಶ್ ಮಾಲ್ತೊಟ್ಟು, ಭಾಮಿ ಅಶೋಕ್ ಶೆಣೈ, ತಾಲೂಕು ಪಂಚಾಯಿತಿ ಸದಸ್ಯ ಶಂಭುಭಟ್, ಉಮೇಶ್ ಶೆಣೈ ಉಪ್ಪಿನಂಗಡಿ, ಕೃಷ್ಣಕುಮಾರ್ ರೈ ತಿಂಗಳಾಡಿ, ರಾಧಾಕೃಷ್ಣ ಬೋರ್ಕರ್, ರಾಧಾಕೃಷ್ಣ ಭಕ್ತ, ಆರ್.ಸಿ. ನಾರಾಯಣ, ರಮೇಶ್ ರೈ ಡಿಂಬ್ರಿ, ಸಂತೋಷ್ ಜಿ. ಬೋನಂತಾಯ, ಹರಿಪ್ರಸಾದ್ ಯಾದವ್ ಕೇಪು, ಪುಷ್ಪಕರ ರೈ ಕೇಪು, ವಾಮನ ಪೈ, ಕೃಷ್ಣ ನಾಯ್ಕ್, ಕುಂಟಿಕಾನ ಲಕ್ಷ್ಮಣ ಗೌಡ, ರವೀಂದ್ರನಾಥ್ ರೈ ಕುರಿಯ, ಆರ್ಯಾಪು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯ ಬಿ.ಎಸ್, ಸುರೇಶ್ ಆಳ್ವ ಸಂಪ್ಯ, ಬಪ್ಪಳಿಗೆ ಚಂದ್ರಶೇಖರ್ ರಾವ್, ಪ್ರಕಾಶ್ಚಂದ್ರ ಕೈಕಾರ, ರಾಧಕೃಷ್ಣ ರೈ ಬುಡಿಯಾರ್, ವಿಜಯ ಹರಿ ರೈ ಮತ್ತಿತರರು ಭಾಗವಹಿಸಿದ್ದರು.