ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬರ ಇದ್ದರೂ ಖರ್ಚಿಗೆ ಕೊರತೆಯಿಲ್ಲ!

Lingaraj Badiger
Updated On : 4 May 2013, 11:41 am

ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದ್ದರೂ, ಕುಡಿಯುವ ನೀರಿಗೆ ಹಾಹಾಕಾರ ಎದ್ದಿದ್ದರೂ, ಬೆಲೆಗಳು ಗನನಕ್ಕೆ ಮುಟ್ಟಿದ್ದರೂ ಚುನಾವಣೆಗೆ ಮಾತ್ರ ಅಭ್ಯರ್ಥಿಗಳು ಕೋಟ್ಯಂತರ ರು. ಖರ್ಚು ಮಾಡುತ್ತಿದ್ದಾರೆ. ಜಯ ಗಳಿಸಿದರೆ ಖರ್ಚು ಮಾಡಿದ ಹಣದ ಹತ್ತಾರು ಪಟ್ಟು ರಾಜ್ಯದ ಖಜಾನೆಯಿಂದ ದರೋಡೆ ಮಾಡಲಿದ್ದಾರೆ. ಇಂಥವರಿಂದ ರಾಜ್ಯದ ಜನರು ನೆಮ್ಮದಿಯ ಜೀವನ ನಿರೀಕ್ಷಿಸುವುದು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ಮತದಾರನೂ ಯೋಚಿಸಿ ತನ್ನ ಅಮೂಲ್ಯ ಮತವನ್ನು ಚಲಾಯಿಸಲೇಬೇಕು. ಜಾತಿ, ಧರ್ಮ, ಭ್ರಷ್ಟಾಚಾರ ಇವುಗಳಿಂದ ಮುಕ್ತವಾಗಿರುವ, ಆಮಿಷ ಒಡ್ಡದ, ಸುಳ್ಳು ಆಶ್ವಾಸನೆ ನೀಡದ, ಗೆದ್ದ ನಂತರ ಅಧಿಕಾರಕ್ಕಾಗಿ ಪರಸ್ಪರ ಕಾಲೆಳೆಯದ, ಮಾನವೀಯ ಸಂಬಂಧಗಳಿಗೆ ಬೆಲೆ ಕೊಡುವ ಮತ್ತು ನಿಸ್ವಾರ್ಥ ಅಭ್ಯರ್ಥಿಯನ್ನು ಹುಡುಕಿ ಆರಿಸಬೇಕು.
    

ಮತ ಹಾಕುವಲ್ಲಿ ವಿಮುಖರಾಗಬೇಡಿ
ಪ್ರಜ್ಞಾವಂತ ಮತದಾರರು ಮತ ಹಾಕುವಲ್ಲಿ ವಿಮುಖರಾಗುತ್ತಿರುವುದೇ ರಾಜಕೀಯ ಗೊಂದಲಕ್ಕೆ ಕಾರಣ. ಇದು ದೇಶದ ದುರಂತ ಕೂಡ ಹೌದು. ಮತದಾನ ಎಲ್ಲರ ಕರ್ತವ್ಯ ಎಂದು ಅರಿತಾಗ ಮಾತ್ರ ಶೇ. ನೂರು ಮತದಾನ ಪೂರ್ತಿಯಾಗಲು ಸಾಧ್ಯ. ಜನಪ್ರತಿನಿಧಿಗಳ ದೃಷ್ಟಿಕೋನ ಕೇವಲ ಅನಕ್ಷರಸ್ಥರು, ಆಮಿಷಗಳಿಗೆ ಬಲಿಯಾಗುವ ಬಡಪಾಯಿಗಳು. ಇವುಗಳ ಪರಿಣಾಮದ ಬಗ್ಗೆ ವಿದ್ಯಾವಂತರಲ್ಲಿ ಜಾಗೃತಿ ಮೂಡಿಸಲು ಮುಂದಾಗುತ್ತಿಲ್ಲ. ಚುನಾವಣೆ ಆಯೋಗ ಎಂಬ ಸಂಸ್ಥೆ ಇದೆ ಎಂಬುದು ತಿಳಿದಿರುವುದೇ ಈ ವರ್ಷ. ಜನರಿಗೆ ಕಾಣುವಂಥ ದುಂದುವೆಚ್ಚಕ್ಕೆ ಕಡಿವಾಣ ಬಿದ್ದಿದೆ. ಆಯೋಗದ ಕುರಿತು ಹೆಮ್ಮೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement