ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬ್ರಹ್ಮಕಲಶೋತ್ಸವ: ಉಗ್ರಾಣ ಮುಹೂರ್ತ

Lingaraj Badiger
Updated On : 4 May 2013, 11:40 am

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪೂರ್ವಭಾವಿಯಾಗಿ ಶುಕ್ರವಾರ ದೇವಳದ ಸಭಾಭವನದಲ್ಲಿ ಉಗ್ರಾಣ ಮೂಹೂರ್ತ ನೆರವೇರಿಸಲಾಯಿತು.
ಉಗ್ರಾಣ ಸಂಗ್ರಹಿಸುವ ಸ್ಥಳದಲ್ಲಿ ನಂದಾದೀಪವನ್ನು ಬೆಳಗಿಸಿ ಗಣಪತಿ ಮತ್ತು ಅನ್ನಪೂರ್ಣೇಶ್ವರಿ ದೇವರನ್ನು ಪೂಜಿಸಿ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನನ್ಯ ಅಚ್ಚುತ ಮೂಡಿತ್ತಾಯ, ಉಗ್ರಾಣ ಸಮಿತಿ ಅಧ್ಯಕ್ಷ, ಭುಜಂಗ ಗೌಡ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಚನಿಲ ತಿಮ್ಮಪ್ಪ ಶೆಟ್ಟಿ, ದೇವಳ ಕಾರ್ಯನಿರ್ವಹಣಾಧಿಕಾರಿ ಸಿ.ಯು.ಪೂವಪ್ಪ ಅವರು ಉಗ್ರಾಣ ತುಂಬಿಸುವ ಕಾರ್ಯಕ್ರಮ ನೆರವೇರಿಸಿರು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ. ಸುಧಾ ಎಸ್.ರಾವ್, ಸಂತೋಷ್ ಕುಮಾರ್, ಪ್ರಭಾ ಆಚಾರ್ಯ, ಉಗ್ರಾಣ ಸಮಿತಿ ಕಾರ್ಯದರ್ಶಿ ಮೋಹನ್ ರೈ ನರಿಮೊಗ್ರು, ಕೋಶಾಧಿಕಾರಿ ರಾಮಚಂದ್ರ ಕಾಮತ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement