ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಶೋಕ ಮಾತಾ ಚರ್ಚ್ನಲ್ಲಿ 'ಪರಮ ಪ್ರಸಾದ' ಸ್ವೀಕಾರ

Lingaraj Badiger
Updated On : 4 May 2013, 11:43 am

ವಿಟ್ಲ: ವಿಟ್ಲ ಶೋಕ ಮಾತಾ ಇಗರ್ಜಿಯಲ್ಲಿ ಕ್ರೈಸ್ತ ಸಂಪ್ರದಾಯದಂತೆ ಮಕ್ಕಳಿಗೆ ತಮ್ಮ ಜೀವನದ ಬಹು ಮುಖ್ಯ ಅಂಗವಾದ 'ಪರಮ ಪ್ರಸಾದ' ಸ್ವೀಕಾರ ಪೂಜೆ ನಡೆಯಿತು. ರಾಜಸ್ಥಾನದ ಅಜ್ಮೀರ್ನ ಫಾ. ಜಾನ್ ಪಾಯಿಸ್ ಬಲಿ ಪೂಜೆ ನೆರವೇರಿಸಿದರು. ಮುಖ್ಯ ಧರ್ಮಗುರುಗಳಾದ ಪೀಟರ್ ಸೆರಾಮೊ 11 ಜನ ಮಕ್ಕಳಿಗೆ ಪರಮ ಪ್ರಸಾದ ನೀಡಿದರು.
 ಮಕ್ಕಳ ಹೆತ್ತವರು ಮತ್ತು ಮಕ್ಕಳಿಗೆ ಶಾಸ್ತ್ರ ಕಲಿಸಿದ ಕ್ರೈಸ್ತ ಸನ್ಯಾಸಿನಿಯರು ಮಕ್ಕಳಿಗಕೆ ಶುಭ ಹಾರೈಸಿದರು.

--
'ಜೆಡಿಎಸ್ ಅಭಿಯಾನದಿಂದ ಬಿಜೆಪಿ, ಕಾಂಗ್ರೆಸ್ಗೆ ಭೀತಿ'

ಮಂಗಳೂರು: ಜೆಡಿಎಸ್ ಜನರ ಬಳಿಗೆ ತೆರಳಿ ಪ್ರಚಾರ ಅಭಿಯಾನದಿಂದ ಬೆದರಿದ ಕಾಂಗ್ರೆಸ್ ಮತ್ತು ಬಿಜೆಪಿ ಸ್ಟಾರ್ ಪ್ರಚಾರಕನ್ನು ಮಂಗಳೂರಿಗೆ ಕರೆತಂದಿದ್ದಾರೆ ಎಂದು ದಕ್ಷಿಣ ಜೆಡಿಎಸ್ ಅಭ್ಯರ್ಥಿ ಎಸ್.ಪಿ.ಚೆಂಗಪ್ಪ ಹೇಳಿದ್ದಾರೆ.
ಕಾಂಗ್ರೆಸ್ ಸೋನಿಯಾ ಗಾಂಧಿಯನ್ನು ಕರೆತಂದು ಪ್ರಚಾರ ಮಾಡಿಸಿದರು. ಬಿಜೆಪಿಯವರು ನರೇಂದ್ರ ಮೋದಿಯವನ್ನು ಕರೆತಂದರು. ಸಿನಿಮಾ ನಟರ, ಸ್ಟಾರ್ ಪ್ರಚಾರಕರು ಬಂದು ಭಾಷಣ ಮಾಡಿದಕ್ಕೆ ಗೆಲಲ್ಲಲು ಸಾಧ್ಯವಿಲ್ಲ. ಜೆಡಿಎಸ್ ಮನೆ, ಮನೆಗೆ ತೆರಳಿ ಪ್ರಚಾರ ಅಭಿಯಾನ ನಡೆಸುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಶೀಲ್ ನರೋನ್ಹ, ಬಂದರು ಜೆಡಿಎಸ್ ಕಾರ್ಪೊರೇಟರ್ ರಮೀಝಾ ನಾಸಿರ್, ನಾಸಿರ್, ಪರಿಶಿಷ್ಟ ಜಾತಿ ಪಂಗಡ ವಿಭಾಗ ಮುಖಂಡ ಅನಿಲ್ ಇದ್ದರು.
--
ಉಪ್ಪಿನಂಗಡಿ: ಶಕುಂತಳಾ ಶೆಟ್ಟಿ ಪ್ರಚಾರ ಭಾಷಣ

ಉಪ್ಪಿನಂಗಡಿ: ಕಾಂಗ್ರೆಸ್ನಿಂದ ಸ್ಪರ್ಧಿಸುತ್ತಿದ್ದೇನೆ ಎಂಬ ಕಾರಣಕ್ಕೆ ನನ್ನನ್ನು ನಾನಾ ಅಪಾದನೆಗಳ ಮೂಲಕ ಜನ ಮಾನಸದಿಂದ ವಿಮುಖಗೊಳಿಸುವ ಯತ್ನಗಳು ನಡೆಯುತ್ತಿದೆ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಉಪ್ಪಿನಂಗಡಿಯಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೇರಳ ವಯ್ನಾಡು ಜಿಲ್ಲೆಯ ಕಾಂಗ್ರೆಸ್ ವಕ್ತಾರ ಹರೀಶ್ ಬಾಬು ಮಾತನಾಡಿದರು.
ಹೇಮನಾಥ ಶೆಟ್ಟಿ, ಪ್ರವೀಣ್ಚಂದ್ರ ಆಳ್ವ, ಕೆ.ಎಂ.ಇಬ್ರಾಹಿಂ, ಜೋಹರಾ ನಿಸಾರ ಅಹಮ್ಮದ್, ಸಾಹುಲ್ ಹಮೀದ್, ಅಸ್ಕರ ಅಲಿ, ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

'ನೈತಿಕತೆ ಹೆಚ್ಚಾಗಬೇಕಾದರೆ ರಾಮನ ಆದರ್ಶ ಪಾಲಿಸಿ'

ಮಂಗಳೂರು: ಜನರಲ್ಲಿ ನೈತಿಕತೆ ಹೆಚ್ಚಾಗಬೇಕಾದರೆ ರಾಮನ ಆದರ್ಶ ಪಾಲನೆ ಅಗತ್ಯ. ರಾಮಾಯಣದಂಥ ಪುಣ್ಯ ಕಥೆಯನ್ನು ಕೇಳುವುದರಿಂದ ನಾವು ಶ್ರೀರಾಮಚಂದ್ರನ ಆದರ್ಶವನ್ನು ಪಾಲಿಸುವಂತಾಗಬೇಕು ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣ ಪ್ರಸಾದ್ ಮಡ್ತಿಲ ಹೇಳಿದ್ದಾರೆ.
ಶಕ್ತಿನಗರ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ಏ.19ರಿಂದ 27ರ ವರೆಗೆ ನಡೆದ ಶ್ರೀಮದ್ರಾಮಾಯಣ ನವಾಹ ಯಜ್ಞ ಸಮಾರೋಪದಲ್ಲಿ ಮಾತನಾಡಿದರು.
ಈ ಕ್ಷೇತ್ರದಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮೇ 1ರಿಂದ ಪ್ರತಿ ಬುಧವಾರದಂದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಮುಂದೆ ನಿತ್ಯ ಅನ್ನದಾನಕ್ಕೆ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ ಎಂದು ಆಡಳಿತ ಮೊಕ್ತೇಸರ ಕೆ.ಸಿ.ನೈಕ್ ಹೇಳಿದರು.
ವೇದಮೂರ್ತಿ ಹಿರಣ್ಯ ವೆಂಕಟೇಶ್ವರ ಭಟ್, ಉದ್ಯಮಿ ರಮೇಶ್ ಪೆಜತ್ತಾಯ, ಆಡಳಿತಾಧಿಕಾರಿ ಕೃಷ್ಣಕುಮಾರ್, ಸತ್ಯನಾರಾಯಣ ಭಟ್ರಕೋಡಿ ಇದ್ದರು. ಬೆಳಗ್ಗೆ ರಾಮತಾರಕ ಮಂತ್ರ ಯಜ್ಞ ನಡೆದು ಪಾರಾಯಣ ಸಮಾಪ್ತಿಯಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement