ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಚರಂಡಿಗೆ ಬಿದ್ದು, ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ

Vishwanath S
Updated On : 5 May 2013, 11:54 am

ಬಂಟ್ವಾಳ: ಚುನಾವಣಾ ಕರ್ತವ್ಯಕ್ಕೆಂದು ಮತಗಟ್ಟೆಗೆ ಅಧಿಕಾರಿಗಳನ್ನು ಕರೆದೊಯ್ಯುತ್ತಿದ್ದ ಸರ್ಕಾರಿ ಬಸ್ಸೊಂದು ಬ್ರೇಕ್ ವೈಫಲ್ಯದಿಂದ ಚರಂಡಿಗೆ ಬಿದ್ದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಶನಿವಾರ ವಿಟ್ಲ ಸಮೀಪದ ಮುಚ್ಚಿರಪದವು ಎಂಬಲ್ಲಿ ನಡೆದಿದೆ.
ಪುತ್ತೂರು ವಿಧಾನ ಸಭಾ ಕ್ಷೇತ್ರದ 6 ಮತಗಟ್ಟೆಗೆ ಅಧಿಕಾರಿಗಳನ್ನು ಕರೆದುಕೊಂಡು ಬರುತ್ತಿದ್ದ ವೇಳೆ ಮುಚ್ಚಿರಪದವು ಎಂಬಲ್ಲಿ ಈ ಘಟನೆ ನಡೆದಿದೆ,
ಪುತ್ತೂರು ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 76 ಮುಚ್ಚಿರಪದವು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಕೇಂದ್ರ, 77- 78 ಕೊಲ್ಲತ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಪುರ್ವ ಮತ್ತು ಪಶ್ಚಿಮ ಭಾಗದ ಎರಡು ಕೇಂದ್ರ, 79 ಮುರುವ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಕೇಂದ್ರ, 80 ಮುರುವ ಸರ್ಕಾರಿ ಪ್ರೌಢಶಾಲೆಯ ಕೇಂದ್ರ, 81 ಪಕಳಕುಂಜ ಶ್ರೀ ವೇಣುಗೋಪಾಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಕೇಂದ್ರದ ಅಧಿಕಾರಿಗಳನ್ನು ಹೊತ್ತ ಬಸ್ ಯಾರೊಬ್ಬರಿಗೂ ಊಟವಾಗಿಲ್ಲದ ಹಿನ್ನೆಲೆಯಲ್ಲಿ ಎಲ್ಲರೂ ನೇರವಾಗಿ ಮಾಣಿಲ ಶ್ರೀಧಾಮ ಕ್ಷೇತ್ರಕ್ಕೆ ಊಟಕ್ಕೆ ತೆರಳಿದ್ದರು. ಬಳಿಕ ಪಕಳಕುಂಜದಿಂದ ಅಧಿಕಾರಿಗಳನ್ನು ಕೇಂದ್ರದಲ್ಲಿ ಬಿಡುತ್ತಾ ಮುಚ್ಚಿರಪದವಿಗೆ ತಲುಪಿದ ಬಸ್ ಅಧಿಕಾರಿಗಳನ್ನು ಇಳಿಸಿ ಮತ್ತೆ ಪಕಳಕುಂಜ ಕೇಂದ್ರಕ್ಕೆ ತೆರಳಲೆಂದು ತಿರುಗುತ್ತಿದ್ದ ಸಂದರ್ಭ ರಸ್ತೆಯಿಂದ ಹಿಂದೆ ಸರಿದು ರಸ್ತೆ ಬದಿಯ ಚರಂಡಿಗೆ ವಾಲಿತು. ಈ ಸಮಯ ಬ್ರೇಕ್ ವ್ಯಾಕ್ಯೂಮ್ ಖಾಲಿಯಾಗಿ ಬ್ರೇಕ್ ಹಿಡಿಯದೆ ಅರ್ಧ ಬಸ್ ಹಿಂದೆ ಸರಿದು ವಿದ್ಯುತ್ ಕಂಬಕ್ಕೆ ತಾಗಿ ನಿಂತಿತು.
ಸ್ಥಳೀಯರು ಹಲವಾರು ರೀತಿಯಲ್ಲಿ ಪ್ರಯತ್ನಿಸಿದರೂ ಬಸ್ಸನ್ನು ತೆಗೆಯಲಾಗಲಿಲ್ಲ. ಬಳಿಕ ಜೆಸಿಬಿ ತಂದು ಸತತ 1.45 ಗಂಟೆ ಕಾರ್ಯಾಚರಣೆ ಮಾಡಿ ವಿದ್ಯುತ್ ಕಂಬಕ್ಕೆ ಯಾವುದೇ ಹಾನಿಯಾಗದಂತೆ ಬಸ್ಸನ್ನು ತೆರವು ಮಾಡಲಾಯಿತು. ಸ್ಥಳಕ್ಕೆ ಚುನಾವಣಾ ವಿಶೇಷ ಅಧಿಕಾರಿಗಳು, ಮೆಸ್ಕಾಂ ಉಕ್ಕುಡ ವಿಭಾಗಾಧಿಕಾರಿ ಆನಂದ, ಪೆರುವಾಯಿ ಲೈನ್‌ಮ್ಯಾನ್ ಮಹೇಶ್ ಸ್ಥಳಕ್ಕೆ ಭೇಟಿ ನೀಡಿದರು. ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement