ಅಜ್ಜನ ಸಾವು ಸಹಿಸದೆ ಮೊಮ್ಮಗ ಆತ್ಮಹತ್ಯೆ
ಉಪ್ಪಿನಂಗಡಿ: ಅನಾರೋಗ್ಯದಿಂದ ಸಾವನ್ನಪ್ಪಿದ ಅಜ್ಜನ ಅಗಲಿಕೆಯನ್ನು ಸಹಿಸದ ಮೊಮ್ಮಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನೂಜಿಬಾಳ್ತಿಲ ಗ್ರಾಮದ ಮಂಜೋಳಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಮಂಜೋಳಿ ನಿವಾಸಿಯಾಗಿದ್ದ ನಾರಾಯಣ ಪಿಳ್ಳೆ (70) ಎಂಬವರು ಅನಾರೋಗ್ಯದ ಕಾರಣದಿಂದ ಶನಿವಾರ ನಿಧನರಾಗಿದ್ದರು.
ಅದೇ ದಿನ ರಾತ್ರಿ ಮೃತರ ಮೊಮ್ಮಗ ವಿನಿತ್ (19) ತನ್ನ ಅಜ್ಜನ ಅಗಲಿಕೆಯನ್ನು ಸಹಿಸದೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.