ಇಂದಿನಿಂದ ಉಚಿತ ಶಿಬಿರ
ಮಂಗಳೂರು: ಹೈಲ್ಯಾಂಡ್ ಇಸ್ಲಾಮಿಕ್ ಫಾರಂ ವತಿಯಿಂದ ಮೇ 6 ರಿಂದ 22 ರವರೆಗೆ ದೇರಳಕಟ್ಟೆ ಕಣಚೂರು ಪಬ್ಲಿಕ್ ಸ್ಕೂಲ್ನಲ್ಲಿ 'ಇಂಗ್ಲಿಷ್ ಮತ್ತು ಕಂಪ್ಯೂಟರ್ ತರಬೇತಿ' ಉಚಿತ ಶಿಬಿರ ನಡೆಯಲಿದೆ. ಸ್ಮರ್ಧಾತ್ಮಕ ಸಮಾಜದಲ್ಲಿ ಬಡ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವುದು ಹಾಗೂ ಅವರ ಭವಿಷ್ಯವನ್ನು ರೂಪಿಸಲು ಬೇಕಾದ ಆಯ್ಕೆಯ ಗುರುತಿಗೆ ನೆರವಾಗುವುದು ಶಿಬಿರದ ಉದ್ದೇಶ ಎಂದು ಫಾರಂ ಅಧ್ಯಕ್ಷ ಮೊಹಮ್ಮದ್ ರಿಝ್ವಾನ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಶಿಬಿರ ಬೆಳಗ್ಗೆ 10 ರಿಂದ ಸಂಜೆ 5ರ ತನಕ ನಡೆಯಲಿದೆ. ಆಸಕ್ತರು ಮೇ 2 ರಿಂದ 5ರೊಳಗೆ ಸ್ಕೂಲಿನಲ್ಲಿ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ 9880978711 ಸಂಪರ್ಕಿಸಬಹುದು ಎಂದರು.