ಈದು: ಮಧ್ಯಾಹ್ನ ಹೊತ್ತಿಗೇ ಶೇ.70 ಮತದಾನ
ಕಾರ್ಕಳ: ತಾಲೂಕಿನ ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆದಿದೆ. ಈದು ಗ್ರಾಮದ ಮತಗಟ್ಟೆಯೊಂದರಲ್ಲಿ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಶೇ.70ರಷ್ಟು ಮತದಾನವಾಗಿತ್ತು.
ಉಳಿದಂತೆ ಕಾಂತಾವರ, ಸಾಣೂರು, ಇವತ್ತೂರು, ನಕ್ರೆ, ಅತ್ತೂರು ಪದವು, ಇನ್ನಿತರ ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆದಿದ್ದು, ನಕ್ಸಲ್ ಬಾಧಿತ ಮತಗಟ್ಟೆಗಳಾದ ಈದು, ಅಂಡಾರು, ಕಬ್ಬಿನಾಲೆಗಳಲ್ಲಿ ಬಿಗಿ ಭದ್ರತೆಯ ನಡುವೆ ಮತದಾನ ನಡೆದಿದೆ.
ಕೆಜೆಪಿ, ಪ್ರಕ್ಷೇತರ ಬೂತ್ ಮಾಯ: ಕೆಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳ ಪರವಾದ ಯಾವುದೇ ಬೂತ್‌ಗಳು ಇರದೇ ಇರುವುದು ವಿಶೇಷವಾಗಿತ್ತು.
ಬಿಜೆಪಿ- ಕಾಂಗ್ರೆಸ್ ಅಭ್ಯರ್ಥಿಗಳ ಮತದಾನ: ಕಾರ್ಕಳ ಶಾಸಕ ಎಚ್. ಗೋಪಾಲ ಭಂಡಾರಿ ಹೆಬ್ರಿ ಗಾಂಧಿನಗರ ಮತಗಟ್ಟೆಯಲ್ಲಿ ಪತ್ನಿ ಪ್ರಕಾಶಿನಿ ಭಂಡಾರಿ ಅವರೊಂದಿಗೆ ಮತದಾನ ಮಾಡಿದರು. ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಅವರು ಕಾಳಿಕಾಂಬ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.